ನಾಡಹಬ್ಬ ದಸರಾ ಮಹೋತ್ಸವದ ಯಶಸ್ವಿಗಾಗಿ ಹರಕೆ ➤ ಚಾಮುಂಡಿಯ ಪಲ್ಲಕ್ಕಿ ರಥ ಎಳೆದು ಹರಕೆ ತೀರಿಸಿದ ಡಿಸಿ ರೋಹಿಣಿ

(ನ್ಯೂಸ್ ಕಡಬ) newskadaba.com ಮೈಸೂರು . 27: ನಾಡಹಬ್ಬ ದಸರಾ ಮಹೋತ್ಸವದ ಯಶಸ್ವಿಗಾಗಿ ಹರಕೆ ಹೊತ್ತಿದ್ದ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕುಟುಂಬ ಮಂಗಳವಾರ ಚಾಮುಂಡಿ ಬೆಟ್ಟದಲ್ಲಿ ಹರಕೆ ತೀರಿಸಿದರು.

ತಂದೆ, ತಾಯಿ, ಪತಿ ಹಾಗೂ ಮಗುವಿನೊಂದಿಗೆ ಚಾಮುಂಡಿಯ ಪಲ್ಲಕ್ಕಿ ರಥ ಎಳೆದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಮೈಸೂರು ನಗರದ ಅಧಿದೇವತೆ ಚಾಮುಂಡೇಶ್ವರಿಗೆ ಹರಕೆ ತೀರಿಸಿದರು.ರೋಹಿಣಿ ಸಿಂಧೂರಿ ಅವರು ಮೈಸೂರು ದಸರಾ ಮಹೋತ್ಸವ ಕೆಲವೇ ದಿನಗಳಿರುವಾಗ ಮೈಸೂರು ಜಿಲ್ಲಾಧಿಕಾರಿಯಾಗಿ ಬಂದಿದ್ದರು.ಮೈಸೂರು ದಸರಾ ಉತ್ಸವ ಸುಸೂತ್ರವಾಗಿ ನಡೆಯುವಂತೆ ಆಶಿಸಿ ಹರಕೆ ಹೊತ್ತು, 9 ದಿನವೂ ಪಲ್ಲಕ್ಕಿ ರಥ ಎಳೆದು ಹರಕೆ ತೀರಿಸಿದ್ದಾರೆ.

Also Read  ಅಡಿಕೆ ಬೆಳೆಗಾರರ ಹಿತರಕ್ಷಣೆ ಮಾಡುವಲ್ಲಿ ಕ್ಯಾಂಪ್ಕೊ ಯಶಸ್ವಿ ➤ ಸತೀಶ್ಚಂದ್ರ

 

 

error: Content is protected !!
Scroll to Top