ಉಜಿರೆ: ನಾಪತ್ತೆಯಾಗಿದ್ದ ನಿವೃತ್ತ ಮುಖ್ಯೋಪಾಧ್ಯಾಯರ ಮೃತದೇಹ ಬಿಸಿಲೆ ಘಾಟ್ ಬಳಿ ನದಿಯಲ್ಲಿ ಪತ್ತೆ

(ನ್ಯೂಸ್ ಕಡಬ) newskadaba.com ಉಜಿರೆ, ಅ.27. ಕಳೆದ ಮೂರು ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ ಉಜಿರೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಪ್ರಸನ್ನ ಕುಮಾರ್ ಜೈನ್ ಅವರು ಬಿಸಲೆ ಘಾಟ್ ಬಳಿ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಅಕ್ಟೋಬರ್ 22 ರಂದು ಬೆಳಗ್ಗೆ ಡೈರಿಯಿಂದ ಹಾಲು ತರಲೆಂದು ಬೈಕಿನಲ್ಲಿ ತೆರಳಿದ್ದ ಇವರು ವಾಪಸು ಮನೆಗೆ ಬರದೆ ನಾಪತ್ತೆಯಾಗಿದ್ದರು. ಈ ಕುರಿತು ಮನೆಯವರು ನಾಪತ್ತೆ ಬಗ್ಗೆ ಉಜಿರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಪೊಲೀಸರು ಇವರ ಪತ್ತೆಗಾಗಿ ಅವರ ಮೊಬೈಲ್ ನಂಬರ್ ಅನ್ನು ಟ್ರ್ಯಾಕ್ ಮಾಡಿದ ವೇಳೆ ಇವರ ಮೊಬೈಲ್ ನ ಲೊಕೇಶನ್ ಕೊಕ್ಕಡ ಸಮೀಪ ಪಾರ್ಪಿಕಲ್ಲು ಸ್ಥಳವನ್ನು ತೋರಿಸುತ್ತಿತ್ತು. ಆದರೆ ಅ. 26ರ ಮಧ್ಯಾಹ್ನದ ವೇಳೆ ಪ್ರಸನ್ನ ಕುಮಾರ್ ಅವರ ಮೃತದೇಹವು ಬಿಸಲೆ ಘಾಟ್ ಬಳಿ ನದಿಯಲ್ಲಿ ಪತ್ತೆಯಾಗಿದೆ. ಪಕ್ಕದಲ್ಲೇ ಇವರು ಬಳಸಿದ್ದ ಬೈಕ್ ಕೂಡಾ ಪತ್ತೆಯಾಗಿದೆ.

Also Read  PSI ಮೇಲೆ ಶಾಸಕರ ಪುತ್ರನಿಂದ ಹಲ್ಲೆ ಆರೋಪ ➤ ಕೇಸ್ ದಾಖಲು

error: Content is protected !!
Scroll to Top