ಉಡುಪಿ: ವಿಷ ಬೆರೆಸಿಟ್ಟಿದ್ದ ಪಪ್ಪಾಯ ಸೇವಿಸಿ ಮಹಿಳೆ ಮೃತ್ಯು



(ನ್ಯೂಸ್ ಕಡಬ) newskadaba.com ಉಡುಪಿ, ಅ.27: ಮಹಿಳೆಯೊಬ್ಬರು ಕಣ್ತಪ್ಪಿನಿಂದ ಇಳಿಪಾಷಣ ಬೆರೆಸಿಟ್ಟಿದ್ದ ಪಪ್ಪಾಯ ಸೇವಿಸಿ ಸಾವನ್ನಪ್ಪಿರುವ ಘಟನೆ ಹಿರಿಯಡ್ಕ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.





 

 

ಮೃತರನ್ನು ಕುದಿ ಗ್ರಾಮದ ದೇವರಗುಂಡದ ಶ್ರೀಮತಿ(43) ಎಂದು ಗುರುತಿಸಲಾಗಿದೆ. ತಮ್ಮ ಮಗಳ ಕ್ಯಾಶು ಫ್ಯಾಕ್ಟರಿಯಲ್ಲಿ ಇಳಿಗಳ ಕಾಟ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಅಕ್ಟೋಬರ್ 19ರಂದು ಮನೆಯಲ್ಲಿ ಇಲಿಗಳಿಗೆ ಪಪ್ಪಾಯಿ ಹಣ್ಣಿನಲ್ಲಿ ಇಲಿ ಪಾಶಾಣವನ್ನು ಹಾಕಿಟ್ಟಿದ್ದು, ಶ್ರೀಮತಿಯವರು ಕಣ್ತಪ್ಪಿನಿಂದ ಅದೇ ಪಪ್ಪಾಯಿ ಹಣ್ಣುನ್ನು ತಿಂದಿದ್ದು, ಇದರಿಂದಾಗಿ ಅವರಲ್ಲಿ ಹೊಟ್ಟೆನೋವು ಕಾಣಿಸಿಕೊಂಡಿದೆ. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.






 

 

 

error: Content is protected !!
Scroll to Top