ಕಡಬ: ಸ್ವಾತಿ ಇಲೆಕ್ಟ್ರಾನಿಕ್ಸ್, ಇಲೆಕ್ಟ್ರಿಕಲ್ಸ್ & ಪಂಪ್ ಪಾಯಿಂಟ್ ಸ್ಥಳಾಂತರಗೊಂಡು ಶುಭಾರಂಭ ➤ ಪ್ರತೀ ಖರೀದಿಗೆ ವಿಶೇಷ ಆಫರ್, ಸ್ವಾತಿ ಲಕ್ಕೀ ಸ್ಕೀಂ ಆರಂಭ

(ನ್ಯೂಸ್ ಕಡಬ) newskadaba.com ಕಡಬ, ಅ.25. ಕಳೆದ ಹಲವು ವರ್ಷಗಳಿಂದ ಕಡಬದಲ್ಲಿ ಕಾರ್ಯಾಚರಿಸುತ್ತಿದ್ದ ಸ್ವಾತಿ ಇಲೆಕ್ಟ್ರಾನಿಕ್, ಇಲೆಕ್ಟ್ರಿಕಲ್ಸ್ & ಪಂಪ್ ಪಾಯಿಂಟ್ ಮಳಿಗೆಯು ಇಲ್ಲಿನ ಮುಖ್ಯ ರಸ್ತೆಯ ಸೈಂಟ್ ಜೋಕಿಮ್ಸ್ ಕಮರ್ಷಿಯಲ್ ಕಾಂಪ್ಲೆಕ್ಸ್ ಗೆ ಸ್ಥಳಾಂತರಗೊಂಡು ಭಾನುವಾರದಂದು ಶುಭಾರಂಭಗೊಂಡಿತು.

ಸೈಂಟ್ ಜೋಕಿಮ್ಸ್ ಚರ್ಚ್‌ನ ಧರ್ಮಗುರುಗಳಾದ ಫಾ| ರೊನಾಲ್ಡ್ ಲೋಬೋ ರಿಬ್ಬನ್ ಕತ್ತರಿಸುವ ಮೂಲಕ ನೂತನ ಸಂಸ್ಥೆಯನ್ನು ಉದ್ಘಾಟಿಸಿದರು. ಜಿ.ಪ. ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೇಬ್, ಲಯನ್ಸ್ ಕ್ಲಬ್‌ನ ಥಾಮಸ್‌ ಸೇರಿದಂತೆ ಹಲವು ವರ್ತಕರು ನೂತನ ಸಂಸ್ಥೆಗೆ ಶುಭಹಾರೈಸಿದರು. ಕಡಬ ಕದಂಬ ಜೇಸಿಐನ ಪೂರ್ವಾಧ್ಯಕ್ಷ ಕೆ.ಎಸ್.ದಿನೇಶ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಮಾಲಕರಾದ ರಾಜೇಶ್ ಕಂಡೂರು ಹಾಗೂ ಮೈನಾ ದಂಪತಿ ವಂದಿಸಿದರು.

Also Read  ಮಂಗಳೂರು: ಪ್ರಜಾಪ್ರಭುತ್ವದ ಆಶಯಗಳನ್ನು ಗೌರವಿಸಿ ➤ ಡಾ|| ಚೂಂತಾರು

ಶುಭಾರಂಭದ ಪ್ರಯುಕ್ತ 20% ವರೆಗೆ ವಿಶೇಷ ರಿಯಾಯಿತಿ ಹಾಗೂ ‘ಸುಲಭ ಮಾಸಿಕ ಕಂತುಗಳ ಸ್ವಾತಿ ಗಿಫ್ಟ್ ಸ್ಕೀಂ’ ಯೋಜನೆಯನ್ನು ಕಲ್ಪಿಸಲಾಗಿದ್ದು, ಪ್ರಥಮ ಡ್ರಾ ನವೆಂಬರ್ 05 ರಂದು ನಡೆಯಲಿದೆ. ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

error: Content is protected !!
Scroll to Top