ಮಂಗಳೂರು: ಶ್ರೀನಿವಾಸ್ ವಿವಿ ಫಿಸಿಯೋಥೆರಪಿ ಕಾಲೇಜಿಗೆ ಎರಡು ನೂತನ ಯಂತ್ರಗಳ ಅಳವಡಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 24. ನಗರದ ಪಾಂಡೇಶ್ವರದಲ್ಲಿರುವ ಶ್ರೀನಿವಾಸ್‍ವಿಶ್ವವಿದ್ಯಾಲಯದ ಕಾಲೇಜ್‍ ಆಫ್ ಫಿಸಿಯೋಥೆರಪಿಯ ಹೊರ ರೋಗಿ ವಿಭಾಗದಲ್ಲಿ ನೂತನವಾದ ಹೊಸ ಆವಿಷ್ಕಾರದ ತಂತ್ರಜ್ಞಾನವನ್ನು ಒಳಗೊಂಡ ಟೆಕ್‍ ಲೇಸರ್‍ ಎಸ್ಸ್ 2000 ಮತ್ತು ವೇವ್‍ ಸ್ಟಾರ್ ಎಂಬ ಎರಡು ಯಂತ್ರಗಳನ್ನು ಅಳವಡಿಸಲಾಗಿದೆ. ಇವುಗಳನ್ನು ಉಡುಪಿಯ ಪಲಿಮಾರು ಮಠದ ಶ್ರೀಶ್ರೀಶ್ರೀ ವಿದ್ಯಾಧೀಶತೀರ್ಥ ಸ್ವಾಮಿಜಿಯವರು ಉದ್ಘಾಟಿಸಿದರು.

ಈ ಸಂದರ್ಭ ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಾಧಿಪತಿ  ಶ್ರೀ ಸಿಎ ಎ. ರಾಘವೇಂದ್ರ ರಾವ್, ಸಹ ಕುಲಾಧಿಪತಿ, ಡಾ ಎ. ಶ್ರೀನಿವಾಸ್‍ ರಾವ್, ಕುಲಪತಿ ಡಾ. ಪಿ. ಎಸ್. ಐತಾಳ್, ಕುಲ ಸಚಿವರುಗಳು ಆಡಳಿತ ಮಂಡಳಿಯ ಟ್ರಸ್ಟಿ ಸದಸ್ಯರುಗಳಾದ ಶ್ರೀಮತಿ ವಿಜಯಲಕ್ಷ್ಮಿಆರ್. ರಾವ್, ಪ್ರೊ. ಎ. ಮಿತ್ರಾ ಎಸ್. ರಾವ್, ಕುಲಸಚಿವ ಆದಿತ್ಯ ಕುಮಾರ್ (ಶೈಕ್ಷಣಿಕ ಮತ್ತುಅಭಿವೃದ್ಧಿ) ಉಪಸ್ಥಿತರಿದ್ದರು. ಶ್ರೀನಿವಾಸ್ ವಿಶ್ವವಿದ್ಯಾಲಯದ ಕಾಲೇಜ್‍ ಆಫ್ ಫಿಸಿಯೋಥೆರಪಿಯ ಹೊರರೋಗಿ ವಿಭಾಗವು ಸಮುದಾಯಕ್ಕೆ ಸುರಕ್ಷಿತವಾದ ಆರೈಕೆಯನ್ನು ನೀಡುವ ಉದ್ದೇಶದೊಂದಿಗೆ ಉಚಿತವಾದ ಚಿಕಿತ್ಸೆಯನ್ನು ನೀಡುತ್ತಾ ಬಂದಿದೆ.

Also Read  ರಾಯಲ್ ಫ್ರೆಂಡ್ಸ್ ಗೂನಡ್ಕ ವತಿಯಿಂದ ಜಿಎಸ್ ಎಲ್ 2022 ಸೀಸನ್-5 ಫುಟ್ಬಾಲ್ ಪಂದ್ಯಾಟ ➤ ಪ್ರಥಮ ಸ್ಥಾನ ಪಡೆದ ಯುನೈಟೆಡ್ ಅರಂಬೂರು

error: Content is protected !!
Scroll to Top