ಸಕ್ರೆಬೈಲು :ಕಾಡಾನೆ ದಾಳಿಗೆ ಆಕರ್ಷಣೀಯ ಆನೆ “ರಂಗ” ಬಲಿ

(ನ್ಯೂಸ್ ಕಡಬ) newskadaba.com ಸಕ್ರೆಬೈಲು . 24: ಸಕ್ರೆಬೈಲು ಆನೆ ಬಿಡಾರದ ಪ್ರಮುಖ ಆಕರ್ಷಣೆಯಾಗಿದ್ದ ಆನೆರಂಗ ಸಾವನ್ನಪ್ಪಿದೆ. ಈ ಮೂಲಕ ಒಂದೇ ವಾರದಲ್ಲಿ ಮರಿಯಾನೆ ಸೇರಿ ಮೂರು ಆನೆಗಳು ವಿವಿಧ ಕಾರಣಗಳಿಂದ ಸಾವನ್ನಪ್ಪಿವೆ.  ಬಿಡಾರದ ಅತ್ಯಂತ ಆಕರ್ಷಣೀಯ ಆನೆ ಎಂದೇ ಖ್ಯಾತಿ ಪಡೆದಿದ್ದ ಸಾಕಾನೆ ರಂಗ ಇಂದು ಕಾಡಾನೆಯ ದಂತ ತಿವಿತಕ್ಕೆ ಅಸುನೀಗಿದ್ದಾನೆ.

ಕಳೆದ ರಾತ್ರಿ ಕಾಡಾನೆ ಏಕಾಏಕಿ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಸರಪಳಿಯಲ್ಲಿ ಬಂಧಿಯಾಗಿದ್ದ ರಂಗ ಅದರ ದಂತ ತಿವಿತಕ್ಕೆ ಬಲಿಯಾಗಿದ್ದಾನೆ. ತನ್ನ ಮೈಕಟ್ಟಿನಿಂದಲೇ ಎಲ್ಲರನ್ನು ಆಕರ್ಷಿಸಿದ್ದ ರಂಗ ಸರಪಳಿಯ ಬಂಧನದಿಂದಾಗಿ ಅಸಹಾಯಕನಾಗಿ ದಂತ ತಿವಿತಕ್ಕೆ ಸಾವನ್ನಪ್ಪಿದ್ದಾನೆ. ಸಕ್ರೆಬೈಲು ಕ್ಯಾಂಪ್​ನಲ್ಲಿ ಹುಟ್ಟಿದ್ದ ರಂಗ ಗೀತಾ ಎಂಬ ಹೆಣ್ಣು ಆನೆಗೆ ಜನಿಸಿದ್ದ. ಘಟನೆ ಬೆಳಕಿಗೆ ಬರುತ್ತಿದ್ದಂತ ಸ್ಥಳಕ್ಕೆ ಅರಣ್ಯಾಧಿಕಾರಿ ಮತ್ತು ವೈದ್ಯರ ತಂಡ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Also Read  ಸಹೋದ್ಯೋಗಿಗೆ ʼಆಸಿಡ್‌ʼ ಮೆಸೇಜ್‌ ಮಾಡಿ ಕೆಲಸ ಕಳೆದುಕೊಂಡ ಯುವಕ

 

error: Content is protected !!
Scroll to Top