ಪೆರುವಾಜೆ : ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಪ್ರಾರಂಭ

(ನ್ಯೂಸ್ ಕಡಬ) newskadaba.com ಪೆರುವಾಜೆ . 23: ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಅ.16 ರಂದು ನವರಾತ್ರಿ ಉತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಪ್ರಾರಂಭಗೊಂಡಿದ್ದು, ಅ.24 ರವರೆಗೆ ನಡೆಯಲಿದೆ.

 

ಪ್ರತೀ ದಿನ ಸಂಜೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯುತ್ತಿದೆ. ರಾತ್ರಿ ಶ್ರೀ ಕ್ಷೇತ್ರದ ರಂಗಪೂಜೆ ನಂತರ ಭಕ್ತಾದಿಗಳ ಸಾಮೂಹಿಕ ರಂಗಪೂಜೆ, ಮಹಾಪೂಜೆ ನಡೆದ ಬಳಿಕ ಅನ್ನಸಂತರ್ಪಣೆ ನಡೆಯುತ್ತಿದೆ. ಅ. 25 ರಂದು ವಿಜಯ ದಶಮಿ ಕಾರ್ಯಕ್ರಮ ನಡೆಯಲಿದೆ. ಮಕ್ಕಳಿಗೆ ಅಕ್ಷರಾಭ್ಯಾಸ ನಡೆಯಲಿದೆ ಎಂದು ದೇವಸ್ಥಾನದ ಆಡಳಿತಾಧಿಕಾರಿ ಪದ್ಮನಾಭ ನೆಟ್ಟಾರು ತಿಳಿಸಿದ್ದಾರೆ.ಈಗಾಗಲೇ ದೇವಸ್ಥಾನದಲ್ಲಿ ಆಯುಧಪೂಜೆಯು ಆರಂಭಗೊಂಡಿದ್ದು, ನೂರಾರು ಜನ ಭಕ್ತಾದಿಗಳು ಆಗಮಿಸಿ ತಮ್ಮ ವಾಹನಗಳಿಗೆ ಪೂಜೆ ಮಾಡಿಸುತ್ತಿದ್ದಾರೆ

Also Read  ಈ 4 ರಾಶಿಯವರಿಗೆ ಮದುವೆ ಯೋಗ ದಾಂಪತ್ಯದಲ್ಲಿ ಸಮಸ್ಯೆ ನಿವಾರಣೆಯಾಗುತ್ತದೆ ಕಷ್ಟಗಳು ಪರಿಹಾರವಾಗುತ್ತದೆ

 

error: Content is protected !!
Scroll to Top