ಮೊದಲ ಮಹಿಳಾ ಐಎಎಫ್ ಅಧಿಕಾರಿ ವಿಂಗ್ ಕಮಾಂಡರ್ ವಿಜಯಲಕ್ಷ್ಮಿ ರಮಣನ್ ನಿಧನ

(ನ್ಯೂಸ್ ಕಡಬ) newskadaba.com ಬೆಂಗಳೂರು . 22: ಭಾರತೀಯ ವಾಯು ಸೇನೆಯಲ್ಲಿ ವಿಂಗ್ ಕಮಾಂಡರ್ ಆಗಿ ನೇಮಕಗೊಂಡಿದ್ದ ದೇಶದ ಮೊದಲ ಮಹಿಳಾ ಐಎಎಫ್ ಅಧಿಕಾರಿ ವಿಜಯಲಕ್ಷ್ಮಿ ರಮಣನ್(96) ಜಯನಗರದಲ್ಲಿರುವ ಅವರ ಪುತ್ರಿಯ ನಿವಾಸದಲ್ಲಿ ಅ.18ರಂದು ನಿಧನ ಹೊಂದಿದರು ಎಂದು ತಿಳಿದು ಬಂದಿದೆ.

ತಮ್ಮ ಜೀವನದ ಕೊನೆಗಳಿಗೆಯವರೆಗೆ ಯಾರ ನೆರವು ಇಲ್ಲದೆ ಸ್ವತಂತ್ರವಾಗಿ ಬದುಕಿದ ವಿಜಯಲಕ್ಷ್ಮಿ ಹಲಸೂರು ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲೆ ಉಳಿದುಕೊಂಡಿದ್ದರು.ಆದರೆ ವಯೋ ಸಹಜ ಅನಾರೋಗ್ಯದಿಂದಾಗಿ ಮಗಳ ಮನೆಯಲ್ಲಿ ಉಳಿದುಕೊಂಡಿದ್ದರು. 10 ದಿನಗಳ ಹಿಂದೆ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು ಬಳಿಕ ಅವರನ್ನು ಕಮಾಂಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆದು ಪುನಃ ಮನೆಗೆ ಹಿಂದಿರುಗಿದರು. ಆದರೆ ಭಾನುವಾರ ರಾತ್ರಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.

Also Read  ಬಂಟ್ವಾಳ: ಮನೆಗೆ ನುಗ್ಗಿ ಚಿನ್ನಾಭರಣ ಕಳವು

 

error: Content is protected !!
Scroll to Top