ಉಡುಪಿ: ಪ್ರಯಾಣಿಕರ ಸೋಗಿನಲ್ಲಿ ಬಂದು ಪರ್ಸ್ ಕಳವುಗೈದ ಮೂವರು ಮಹಿಳೆಯರು

(ನ್ಯೂಸ್ ಕಡಬ) newskadaba.com ಉಡುಪಿ, ಅ. 21. ಪ್ರಯಾಣಿಕರ ಸೋಗಿನಲ್ಲಿ ಬಂದ ಮೂವರು ಕಳ್ಳರು ಮಹಿಳೆಯೋರ್ವರ ಪರ್ಸ್ ಕದ್ದೊಯ್ದ ಘಟನೆ ಉಡುಪಿಯಲ್ಲಿ ನಡೆದಿದೆ.


ಬೆಂಗಳೂರಿನಿಂದ ಬಂದಿದ್ದ ಅರ್ಚನಾ ರಾವ್ ಎಂಬವರು ಕುಂಜಿಬೆಟ್ಟುವಿಗೆ ಹೋಗಲೆಂದು ಸಿಟಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕಡಿಯಾಳಿ ಎಂಬಲ್ಲಿ ಮೂವರು ಮಹಿಳೆಯರು ಬಸ್ ಹತ್ತಿದ್ದರು. ಇವರ ಬಳಿಯಲ್ಲಿದ್ದ ಮಗುವನ್ನು ಬಳಿಯಲ್ಲಿದ್ದ ಮಗುವನ್ನು ಅರ್ಚನಾ ರಾವ್ ಅವರು ತನ್ನ ತೊಡೆಯ ಮೇಲೆ ಕೂರಿಸಿಕೊಂಡಿದ್ದರು. ಬಳಿಕ ಬಸ್ಸಿನಿಂದ ಇಳಿದು ಬ್ಯಾಗ್ ಪರಿಶೀಲನೆ ಮಾಡಿದಾಗ ಅದರಲ್ಲಿ ಪರ್ಸ್ ಇರಲಿಲ್ಲ. ಮಹಿಳೆಯರು ತಂಡವು ಅರ್ಚನಾ ರಾವ್ ಅವರ ಬ್ಯಾಗಿನಲ್ಲಿದ್ದ ಪರ್ಸ್ ಅನ್ನು ಕದ್ದೊಯ್ದಿದ್ದಾರೆ ಎನ್ನಲಾಗಿದೆ.

Also Read  ಪುತ್ತೂರು: ವಿದ್ಯಾರ್ಥಿನಿಯರನ್ನು ಹಿಂಬಾಲಿಸಿಕೊಂಡು ಬಂದ ಅಪರಿಚಿತರು ಹಾಗೂ ವಿದ್ಯಾರ್ಥಿಗಳ ನಡುವೆ ಮಾತಿನ‌ ಚಕಮಕಿ..! ➤ ಸ್ಥಳಕ್ಕಾಗಮಿಸಿದ ಪೊಲೀಸರು

ಅಲ್ಲದೇ ಪರ್ಸ್ ನಲ್ಲಿದ್ದ 5 ಸಾವಿರ ರೂಪಾಯಿ ನಗದು, 4 ಎಟಿಎಂ ಕಾರ್ಡ್ ಹಾಗೂ ದಾಖಲೆ ಪತ್ರಗಳು ಕಳವಾಗಿತ್ತು. ಭಯದಿಂದ ಮೊಬೈಲ್ ತೆಗೆದು ನೋಡಿದಾಗ ಬ್ಯಾಂಕ್ ಖಾತೆಯಿಂದ 25 ಸಾವಿರ ರೂಪಾಯಿ ವಿಥ್ ಡ್ರಾ ಆಗಿರುವ ಮೆಸೇಜ್ ಕೂಡಾ ಬಂದಿದೆ. ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಗೆ ಅರ್ಚನಾ ರಾವ್ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಳ್ಳರಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.

error: Content is protected !!
Scroll to Top