ಕೊವೀಡ್ ಗೆ ಪತ್ರಕರ್ತ ಪವನ್ ಹೆತ್ತೂರು ನಿಧನ

(ನ್ಯೂಸ್ ಕಡಬ) newskadaba.com  ಹಾಸನ . 18: ಪ್ರಜಾವಾಣಿ,ವಿಜಯವಾಣಿ ಹಾಗೂ ಕಸ್ತೂರಿ ಟಿವಿಯಲ್ಲಿ ಕೆಲಸ ಮಾಡಿದ್ದ ಉತ್ಸಾಹಿ ಪತ್ರಕರ್ತ ಪವನ್ ಹೆತ್ತೂರು (35) ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.

ಸದ್ಯ ಪ್ರಜಾವಾಣಿ ಮೈಸೂರು ಬ್ಯೂರೋದಲ್ಲಿ ಕೆಲಸ ಮಾಡುತ್ತಿದ್ದ ಪವನ್, ಪತ್ನಿ, ಇಬ್ಬರು ಚಿಕ್ಕ ಮಕ್ಕಳನ್ನು ಅಗಲಿದ್ದಾರೆ. ಮೈಸೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಪವನ್​ಗೆ ಆರೋಗ್ಯ ಗಂಭೀರವಾಗಿ, ಚಿಕಿತ್ಸೆಗೆ ಸ್ಪಂದಿಸಲಿಲ್ಲ. ರಾತ್ರಿ 1.30 ಸುಮಾರಿಗೆ ಕೊನೆಯುಸಿರೆಳೆದರು.ಮೃತರ ಅಂತ್ಯಕ್ರಿಯೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೆತ್ತೂರಿನಲ್ಲಿ ನಡೆಯಲಿದೆ. ಪತ್ರಕರ್ತ ಪವನ್ ನಿಧನಕ್ಕೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ.

Also Read  ಬೆಳ್ಳಂಬೆಳಗ್ಗೆ ಕಾವೂರು ಮಾರುಕಟ್ಟೆಗೆ ಮಹಾನಗರ ಮೇಯರ್ ದಾಳಿ

 

 

error: Content is protected !!
Scroll to Top