ಟ್ರಕ್ ನಲ್ಲಿ 10 ಟನ್ ದನದ ಮಾಂಸ ಸಾಗಾಟ ➤ ಇಬ್ಬರು ಆರೋಪಿಗಳ ಅರೆಸ್ಟ್

(ನ್ಯೂಸ್ ಕಡಬ) newskadaba.com ಮಂಗಳೂರು . 18: ಕೇರಳದಿಂದ ಮಂಗಳೂರಿಗೆ ಬರುತ್ತಿದ್ದ ಕಂಟೆನರ್‌ನಲ್ಲಿ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ಆರೋಪದ ಮೇರೆಗೆ ಕಂಕನಾಡಿ ಪೊಲೀಸರು ಇಬ್ನರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಇಂದು ಮುಂಜಾನೆ ನಗರದ ಪಡೀಲ್ ಬಳಿ ಈ ವಾಹನವನ್ನು ತಡೆದ ಪೊಲೀಸರು ಗೋಮಾಂಸ ಪತ್ತೆ ಹಚ್ಚಿದ್ದಾರೆ ಎಂದು ತಿಳಿದುಬಂದಿದೆ.ಸುಮಾರು 10 ಟನ್ ಮಾಂಸವನ್ನು ವಶಕ್ಕೆ ಪಡೆಯಲಾಗಿದೆ.

ಈ ವಾಹನದಲ್ಲಿ ಮೀನು‌ ತುಂಬಿಸುವ ಬಾಕ್ಸ್ ಗಳನ್ನು ಸೇರಿಸಿಟ್ಟು ಅದರ ಮಧ್ಯೆ ಗೋಮಾಂಸ ತುಂಬಿಸಿಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.ಇದಕ್ಕೆ ಸಂಬಂಧಪಟ್ಟಂತೆ ಹೆಚ್ಚಿನ ತನಿಖೆಯನ್ನು ಕಂಕನಾಡಿ ಪೊಲೀಸರು ನಡೆಸುತ್ತಿದ್ದಾರೆ.

Also Read  ಕುಂದಾಪುರ : ಬೈಕ್ ಗೆ ಕ್ರೇನ್ ಢಿಕ್ಕಿ ➤ ಸಹಸವಾರ ಸ್ಥಳದಲ್ಲೇ ಮೃತ್ಯು..!

 

error: Content is protected !!
Scroll to Top