ಬೈಂದೂರು : ವೃತ್ತ ನಿರೀಕ್ಷಕರ ಜೀಪು ಚಾಲಕ ನಿಯಂತ್ರಣ ತಪ್ಪಿ ಪಲ್ಟಿ

(ನ್ಯೂಸ್ ಕಡಬ) newskadaba.com ವಿಟ್ಲ . 16: ಕಾರೊಂದನ್ನು ಫಾಲೋ ಮಾಡಲು ಹೋಗಿದ್ದ ಬೈಂದೂರು ವೃತ್ತ ನಿರೀಕ್ಷಕರ ಜೀಪು ಚಾಲಕ ನಿಯಂತ್ರಣ ತಪ್ಪಿ ಪಲ್ಟಿಯಾಗಿ ವೃತ್ತ ನೀರಿಕ್ಷಕ ಸುರೇಶ್ ನಾಯ್ಕ್ ಮತ್ತು ಅವರ ಚಾಲಕ ಹೇಮ ರಾಜ್ ಗಾಯಗೊಂಡ ಘಟನೆ ಗುರುವಾರ ತಡರಾತ್ರಿ ಸಂಭವಿಸಿದೆ.

 

ಗುರುವಾರ ತಡ ರಾತ್ರಿ ರಾಷ್ಟ್ರೀಯ ಹೆದ್ದಾರಿಯ ಒತ್ತಿನೆಣೆ ಬಳಿ ರಾತ್ರಿ ಗಸ್ತು ತಿರುಗುತ್ತಿರುವ ವೇಳೆ ಮಾರುತಿ ಓಮಿನಿ ಕಾರೊಂದು ವೃತ್ತ ನಿರೀಕ್ಷಕರ ಜೀಪನ್ನು ಕಂಡು ಅನುಮಾಸ್ಪದವಾಗಿ ವೇಗವಾಗಿ ಹೋಗಿದ್ದು, ಅದನ್ನು ಬೆನ್ನಟ್ಟಿಕೊಂಡು ಹೋದವೇಳೆ ಬೈಂದೂರು ರಾಘವೇಂದ್ರ ಮಠದ ಬಳಿ ಜೀಪು ಪಲ್ಟಿಯಾಗಿದ್ದು, ಘಟನೆಯಲ್ಲಿ ವೃತ್ತ ನಿರೀಕ್ಷಕ ಸುರೇಶ್ ನಾಯ್ಕ್ ಮತ್ತು ಅದರ ಚಾಲಕ ಸಣ್ಣ ಪುಟ್ಟ ಗಾಯಗೊಳೊಂದಿಗೆ ಪಾರಾಗಿದ್ದಾರೆ ಎಂದು ಹೇಳಿದ್ದಾರೆ. ಗಾಯಗೊಂಡಿರುವ ವೃತ್ತ ನೀರಿಕ್ಷ ಸುರೇಶ್ ನಾಯ್ಕ್ ಮತ್ತು ಚಾಲಕ ಹೇಮರಾಜ್ ಅವರು ಸದ್ಯ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

 

Also Read  ವಿದ್ಯಾಭಾರತಿ ಅಖಿಲ ಭಾರತ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟ ► ಕಡಬ ಸರಸ್ವತೀ ವಿದ್ಯಾಲಯ ತಂಡ ಪ್ರಥಮ ಸ್ಥಾನದೊಂದಿಗೆ ರಾಷ್ಟ್ರಮಟ್ಟಕ್ಕೆ

 

error: Content is protected !!
Scroll to Top