(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಅ. 13. ಎಸ್ಡಿಪಿಐ ಉಪ್ಪಿನಂಗಡಿ ವಲಯದ ಅಧೀನದಲ್ಲಿರುವ ಗ್ರಾಮ ಪಂಚಾಯತ್ ಗಳಿಗೆ ಪಕ್ಷದ ಮೊದಲ ಹಂತದ ಅಭ್ಯರ್ಥಿಗಳ ಘೋಷಣೆ ಮತ್ತು ಕಾರ್ಯಕರ್ತರ ಸಮಾವೇಶವು ಉಪ್ಪಿನಂಗಡಿ ಕಛೇರಿಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿಗಳಾದ ಇಕ್ಬಾಲ್ ಬೆಳ್ಳಾರೆ ಮಾತನಾಡಿ, ಎಸ್ಡಿಪಿಐ ಪಕ್ಷದ ಅವಶ್ಯಕತೆ ಮತ್ತು ಪಕ್ಷದ ಪ್ರಾಧಾನ್ಯತೆಯ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು. ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ತಳ ಮಟ್ಟದಲ್ಲಿ ಕಾರ್ಯಕರ್ತರು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ಮುಖ್ಯ ಅಥಿತಿಯಾಗಿ ಆಗಮಿಸಿದ್ದ ಎಸ್ಡಿಪಿಐ ಪುತ್ತೂರು ತಾಲೂಕು ಅಧ್ಯಕ್ಷರಾದ ಕೆ.ಎ ಸಿದ್ದೀಕ್ ಮಾತನಾಡಿ ಮುಂಬರುವ ಪಂಚಾಯತ್ ಚುನಾವಣೆಗೆ ಸ್ಥಳೀಯ ವಿವಿಧ ಗ್ರಾಮದ ಮೊದಲ ಹಂತದ ಅಭ್ಯರ್ಥಿಯ ಘೋಷಣೆ ಮಾಡಿದರು. ನಂತರದ ದಿನಗಳಲ್ಲಿ ಹಂತ ಹಂತವಾಗಿ ಅಭ್ಯರ್ಥಿಗಳನ್ನು ಘೋಷಣೆ ಮಾಡಲಿದ್ದೇವೆ, ಕಾರ್ಯಕರ್ತರು ಹಿತೈಷಿಗಳು ಪಕ್ಷದ ಕಾರ್ಯವೈಖರಿ, ಸಿದ್ಧಾಂತವನ್ನು ಜನಸಾಮಾನ್ಯರಿಗೆ ತಿಳಿಯಪಡಿಸುವ ಮೂಲಕ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಪಡಬೇಕೆಂದರು.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಪ್ಪಿನಂಗಡಿ ಜಿಲ್ಲಾ ಸಮಿತಿ ಅಧ್ಯಕ್ಷರಾದ ಹಮೀದ್ ಮೆಜೆಸ್ಟಿಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಪುತ್ತೂರು ತಾಲೂಕು ಸಮಿತಿ ಕಾರ್ಯದರ್ಶಿ ಅಶ್ರಫ್ ಬಾವು ಮತ್ತು ಯಹ್ಯಾ, ಎಸ್ಡಿಪಿಐ ಉಪ್ಪಿನಂಗಡಿ ವಲಯಾಧ್ಯಕ್ಷರಾದ ಮುಸ್ತಫಾ ಲತೀಫಿ ಹೀಗೆ ಹಲವರು ಉಪಸ್ಥಿತರಿದ್ದರು. ಉಪ್ಪಿನಂಗಡಿ ವಲಯ ಚುನಾವಣಾ ಉಸ್ತುವಾರಿ ಇಕ್ಬಾಲ್ ಕೆಂಪಿ ಸ್ವಾಗತಿಸಿ, ಉಪ್ಪಿನಂಗಡಿ ವಲಯದ ಕಾರ್ಯದರ್ಶಿ ಅಬ್ದುಲ್ಲಾರವರು ವಂದಿಸಿದರು. ಸಫ್ವಾನ್ ಕಾರ್ಯಕ್ರಮವನ್ನು ನಿರೂಪಿಸಿದರು.
ಪ್ರಥಮ ಹಂತದಲ್ಲಿ ಘೋಷಣೆಯಾದ ಅಭ್ಯರ್ಥಿಗಳ ವಿವರ.
1. ಅಬ್ದುಲ್ಲಾ – ನೆಕ್ಕಿಲಾಡಿ 34 ಗ್ರಾಮದ ಆದರ್ಶ ನಗರ ವಾರ್ಡ್
2. ಮೈಸಿದಿ – ಉಪ್ಪಿನಂಗಡಿ ಗ್ರಾಮದ ಪೆರಿಯಡ್ಕ ವಾರ್ಡ್
3. ಇಕ್ಬಾಲ್ ಕೆಂಪಿ -ಉಪ್ಪಿನಂಗಡಿ ಗ್ರಾಮದ ವಾರ್ಡ್ ಸಂಖ್ಯೆ-1
4. ರಶೀದ್ ಮಠ ಉಪ್ಪಿನಂಗಡಿ ಗ್ರಾಮದ ಮಠ ವಾರ್ಡ್
5. ನೆಬೀಸಾ ಇಲ್ಯಾಸ್ ಉಪ್ಪಿನಂಗಡಿ ಗ್ರಾಮದ ಮಠ ವಾರ್ಡ್
ಎಸ್ಡಿಪಿಐ ಪಕ್ಷದ ನಾಯಕರುಗಳು ಮೊದಲ ಹಂತದ ಅಭ್ಯರ್ಥಿಗಳನ್ನು ಪಕ್ಷದ ಶಾಲು ಹೊದಿಸುವ ಮೂಲಕ ಗೆಲುವಿಗಾಗಿ ಹಾರೈಸಿದರು.