ನಾವೂರು: ಎಸ್ಡಿಪಿಐ ವತಿಯಿಂದ ರಕ್ತದಾನ ಶಿಬಿರ ‌ಹಾಗೂ ಆಶಾ ಕಾರ್ಯಕರ್ತೆ‌ಯರಿಗೆ ಸನ್ಮಾನ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಅ. 11. ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ನಾವೂರು ಬ್ರಾಂಚ್ ವತಿಯಿಂದ ಇನ್ಫೋಮೇಟ್ ಫೌಂಡೇಶನ್( ರಿ) ಇದರ ಸಹಕಾರದೊಂದಿಗೆ ರೋಟರಿ ಬ್ಲಡ್ ಬ್ಯಾಂಕ್ ಪುತ್ತೂರು ಇದರ ಸಹಭಾಗಿತ್ವದಲ್ಲಿ ಸಾರ್ವಜನಿಕ ಬೃಹತ್ ರಕ್ತದಾನ ಶಿಬಿರ ಹಾಗೂ ಅಲ್ಪಸಂಖ್ಯಾತರ ಸವಲತ್ತುಗಳ ಮಾಹಿತಿ ಕಾರ್ಯಾಗಾರ ಮತ್ತು ನಾವೂರು ಗ್ರಾಮದ 3 ಮಂದಿ ಆಶಾ ಕಾರ್ಯಕರ್ತೆಯರಿಗೆ ಸನ್ಮಾನ ಕಾರ್ಯಕ್ರಮವು ಇಂದು ಮುರ ಗ್ಲೋಬಲ್ ಫೌಂಡೇಶನ್ ಕಛೇರಿ ಮುಂಭಾಗದಲ್ಲಿ ನಡೆಯಿತು.

ಎಸ್ಡಿಪಿಐ ನಾವೂರು ಬ್ರಾಂಚ್ ಅಧ್ಯಕ್ಷ ಬಶೀರ್ ಕಳಸ ಅಧ್ಯಕ್ಷತೆ ವಹಿಸಿದ್ದರು. ಮುಹಿಯುದ್ದೀನ್ ಜುಮಾ ಮಸೀದಿ ಮುರ, ಇಲ್ಲಿನ ಸಹಾಯಕ ಖತೀಬರಾದ ಬಹು ರಫೀಕ್ ಮದನಿ ದುಆ ಹಾಗೂ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು. ಎಸ್ಡಿಪಿಐ ದ.ಕ ಜಿಲ್ಲಾ ಉಪಾಧ್ಯಕ್ಷ ಶ್ರೀ ಆಂಟೋನಿ ‌ಪಿ.ಡಿ ಮುಖ್ಯ ಅತಿಥಿಗಳಾಗಿ ಆಗಮಿಸಿ‌ ಕಾರ್ಯಕ್ರಮದ ಆಯೋಜಕರನ್ನು ಅಭಿನಂದಿಸಿದರು. ರೋಟರಿ ಬ್ಲಡ್ ಬ್ಯಾಂಕ್ ಪುತ್ತೂರು ಇದರ ವೈದ್ಯರಾದ ರಾಮಚಂದ್ರ ಭಟ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ಜಿಲ್ಲಾಧ್ಯಕ್ಷ ಮುಸ್ತಫಾ ಜಿ.ಕೆ, ಎಸ್.ವೈ.ಎಸ್ ನಾವೂರು ಶಾಖಾಧ್ಯಕ್ಷ ಬಹು ಅಬ್ದುರ್ರಹ್ಮಾನ್ ಮುಸ್ಲಿಯಾರ್, ಇನ್ಫೋಮೇಟ್ ಫೌಂಡೇಶನ್ (ರಿ) ನಿರ್ದೇಶಕ ಅಬ್ದುಲ್ ಖಾದರ್ ನಾವೂರು, ಡಾ. ಹಸನ್ ಶಿಹಾಂ ಮುರ (MBBS), ಗೌಸಿಯಾ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ಮುರ ಅಧ್ಯಕ್ಷ ಅಬ್ದುಲ್ ರಝಾಕ್ ನಾವೂರು, ಮುರ ಎಂ.ಜೆ.ಎಂ ಸ್ವಲಾತ್ ಕಮಿಟಿ ಅಧ್ಯಕ್ಷ ಇಸ್ಮಾಯಿಲ್ ಗಂಪ, ನಾವೂರು ಇನ್ಫಾಮೇಟ್ ಜೀಸಸ್ ಚರ್ಚ್ ಪ್ರಧಾನ ಕಾರ್ಯದರ್ಶಿ ಶ್ರೀ M.A ವರ್ಗೀಸ್, ಯುನೈಟೆಡ್‌ ಸ್ಪೋರ್ಟ್ಸ್ ಕ್ಲಬ್ ನಾವೂರು ಅಧ್ಯಕ್ಷ ಶಾಹುಲ್ ಹಮೀದ್ ಐಡಿಯಲ್, ಗ್ಲೋಬಲ್ ಫೌಂಡೇಶನ್ ಮುರ ಇದರ ನಿರ್ದೇಶಕ‌ ಹಮೀದ್ ಕುದುರು ಮುಂತಾದವರು ಉಪಸ್ಥಿತರಿದ್ದರು.
ಕೋವಿಡ್ -19 ಸಂಕಷ್ಟದ ಸಂದರ್ಭದಲ್ಲೂ ಅವಿಶ್ರಾಂತ ಸೇವೆ ಸಲ್ಲಿಸಿದ ನಾವೂರು ಗ್ರಾಮದ ಆಶಾ ಕಾರ್ಯಕರ್ತೆಯರಾದ ಶ್ರೀಮತಿ ಜಯಂತಿ, ಶ್ರೀಮತಿ ರೋಹಿಣಿ, ಶ್ರೀಮತಿ ಶಿಲ್ಪಾರವರನ್ನು ಎಸ್ಡಿಪಿಐ ನಾವೂರು ಬ್ರಾಂಚ್ ವತಿಯಿಂದ ಸನ್ಮಾನಿಸಲಾಯಿತು. ರಹ್ಮಾನ್ ನಾವೂರು ಕಾರ್ಯಕ್ರಮ ನಿರೂಪಿಸಿದರು. ಸಲೀಂ ಮುರ ಸ್ವಾಗತಿಸಿ, ಸ್ವಾದಿಕ್ ನಾವೂರು ವಂದಿಸಿದರು.

error: Content is protected !!

Join the Group

Join WhatsApp Group