ಹೆಬ್ರಿ : ಮುದ್ದು ಮಗಳಿಗೆ “ಸೈನ್ಯ” ವೆಂದು ನಾಮಕರಣ

(ನ್ಯೂಸ್ ಕಡಬ) newskadaba.com ಹೆಬ್ರಿ, ಅ. 10: ಸೈನಿಕರೊಬ್ಬರು ತಮ್ಮ ಮಗಳಿಗೆ “ಸೈನ್ಯ” ಎಂದು ಹೆಸರಿಟ್ಟು ದೇಶಪ್ರೇಮ ಮೆರೆದಿದ್ದಾರೆ. ಸೈನ್ಯದ ಮೇಲಿರುವ ವಿಶೇಷ ಪ್ರೀತಿಯನ್ನು, ಕಾಳಜಿಯನ್ನು ತೋರಿದ್ದಾರೆ.ಉಡುಪಿ ಜಿಲ್ಲೆಯಲ್ಲಿ ಕನ್ನಡ ಅಭಿಮಾನಿಯೊಬ್ಬರು ತಮ್ಮ ಹೆಣ್ಣು ಮಗುವಿಗೆ ಕನ್ನಡ ಅಂತ ನಾಮಕರಣ ಮಾಡಿದ್ದು, ಸುದ್ದಿಯಾಗಿತ್ತು.

 

ಈಗ ಅದೇ ರೀತಿಯಲ್ಲಿ ಉಡುಪಿ ಜಿಲ್ಲೆಯ ಹೆಬ್ರಿಯ ಸೈನಿಕರೊಬ್ಬರು ತಮ್ಮ ಹೆಣ್ಣು ಮಗುವಿಗೆ ಸೈನ್ಯ ಅಂತ ಹೆಸರಿಡುವ ಮೂಲಕ ತಮ್ಮ ವೃತ್ತಿಗೆ ಗೌರವ ಸೂಚಿಸಿದ್ದಾರೆ. ಹೆಬ್ರಿ ತಾಲೂಕಿನ ಆಶಾ- ಪ್ರಶಾಂತ್ ಪೂಜಾರಿ ಅವರು ತಮ್ಮ ಮಗುವಿಗೆ ಸೈನ್ಯ ಅಂತ ಹೆಸರಿಡುವ ಮೂಲಕ ಗಮನ ಸೆಳೆದವರು.ಹಲವು ವರ್ಷಗಳಿಂದ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಮಗುವಿನ ತಂದೆ ಪ್ರಶಾಂತ್ ಅವರು ಪ್ರಸ್ತುತ ಜಮ್ಮು ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ದೇಶ ಹಾಗೂ ಸೈನ್ಯದ ಮೇಲಿನ ವಿಶೇಷ ಅಭಿಮಾನ ಇರುವ ಪ್ರಶಾಂತ್ ಮಗುವಿಗೆ ಸೈನ್ಯ ಹೆಸರಿಡುವ ಮೂಲಕ ವೃತ್ತಿಗೆ ಗೌರವ ತೋರಿಸಿದ್ದಾರೆ.

Also Read  ಎರಡು ಪ್ರತ್ಯೇಕ ಪ್ರಕರಣ !     ➤ ಗಾಂಜಾ ನಶೆಯಲ್ಲಿದ್ದ ಇಬ್ಬರು ಆರೋಪಿಗಳು ಅರೆಸ್ಟ್​     

error: Content is protected !!
Scroll to Top