ಆಂಧ್ರ ಸಿಎಂ ಪರಿಹಾರ ನಿಧಿ ಮೇಲೆ ಖದೀಮರ ಕಣ್ಣು ➤ ತುಳು ಚಿತ್ರರಂಗದ ನಿರ್ದೇಶಕ ಸೇರಿ ಆರು ಮಂದಿ ಅರೇಸ್ಟ್

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 08: ಆಂಧ್ರದಲ್ಲಿ ಬಡವರ ನಿಧಿಯ ಹಣ ಲಪಟಾಯಿಸಲು ಯತ್ನ ನಡೆದಿದೆ. ಈ ಪ್ರಕರಣ ಸಂಬಂಧ ತುಳು ಸಿನಿಮಾ ನಿರ್ದೇಶಕ ಉದಯ್ ಕುಮಾರ್ ಕಾಂತಾವರ ಸೇರಿದಂತೆ ಆರು ಮಂದಿಯನ್ನು ಮೂಡಬಿದ್ರೆಯಲ್ಲಿ ಆಂಧ್ರ ಪೊಲೀಸರು ಬಂಧಿಸಿದ್ದಾರೆ.ಆಂಧ್ರಪ್ರದೇಶದಲ್ಲೂ ಸಿಎಂ ಪರಿಹಾರ ನಿಧಿ ಇದೆ. ಆದ್ರೆ ಸಂಕಷ್ಟದಲ್ಲಿರುವವರಿಗೆ ಸೇರಬೇಕಾದ ಹಣಕ್ಕೂ ಖದೀಮರು ಕನ್ನ ಹಾಕಲು ಯತ್ನಿಸಿದ್ದಾರೆ.

ಸಿಎಂ ಪರಿಹಾರ ನಿಧಿಯಿಂದ ನೀಡಿದ್ದ ಚೆಕ್‌ಗಳನ್ನು ತಿರುಚಿ 117 ಕೋಟಿ ರೂಪಾಯಿ ಹಣವನ್ನು ಆಂಧ್ರ ಸಿಎಂ ಪರಿಹಾರ ನಿಧಿಯಿಂದ ವಿತ್ ಡ್ರಾ ಮಾಡಲು ಮಂಗಳೂರು ಕೋಸ್ಟಲ್ ವುಡ್ ಸಿನಿಮಾ ನಿರ್ಮಾಪಕ ಯತ್ನಿಸಿದ್ದಾನೆ.ಸಂಕಷ್ಟದಲ್ಲಿದ್ದ ಆಂಧ್ರದ ವ್ಯಕ್ತಿಯೊಬ್ಬರಿಗೆ 25 ಸಾವಿರ ರೂಪಾಯಿ ಚೆಕ್‌ ಅನ್ನು ಸಿಎಂ ಪರಿಹಾರ ನಿಧಿಯಿಂದ ನೀಡಲಾಗಿತ್ತು. ಚೆಕ್‌ ಪಡೆದ ಖದೀಮ ಅಸಲಿ ಚೆಕ್ ರೀತಿಯೇ ಮತ್ತೊಂದು ನಕಲಿ ಚೆಕ್‌ ಅನ್ನು ತಯಾರಿಸಿದ್ದಾನೆ.

ಬ್ಯಾಂಕ್‌ಗೆ ಹೋಗಿ ಸಿಎಂ ಪರಿಹಾರ ನಿಧಿಯಿಂದ 117 ಕೋಟಿ ರೂಪಾಯಿ ವಿತ್ ಡ್ರಾ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಚೆಕ್‌ನಲ್ಲಿರುವ ಅಮೌಂಟ್‌ ಬಗ್ಗೆ ಅನುಮಾನಗೊಂಡ ಬ್ಯಾಂಕ್ ಅಧಿಕಾರಿಗಳು, ಸಿಎಂ ಪರಿಹಾರ ನಿಧಿಯ ಉಸ್ತುವಾರಿ ಅಧಿಕಾರಿಗಳಿಗೆ ಕರೆ ಮಾಡಿದ್ದಾರೆ. ಕೋಟಿಗಟ್ಟಲೇ ಹಣ ವಿತ್ ಡ್ರಾಗೆ ಚೆಕ್ ನೀಡಿದ್ದೀರಾ ಎಂದು ವಿಚಾರಿಸಿದ್ದಾರೆ. ಅಧಿಕಾರಿಗಳು ಅಷ್ಟು ದೊಡ್ಡ ಮೊತ್ತದ ಚೆಕ್ ನೀಡಿಲ್ಲ ಎಂದಿದ್ದಾರೆ. ನಕಲಿ ಚೆಕ್ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ, ಆಂಧ್ರ ಸರ್ಕಾರವು ಎಚ್ಚೆತ್ತುಕೊಂಡಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ತುಳು ಚಿತ್ರರಂಗದ ನಿರ್ದೇಶಕ ಉದಯ್ ಕುಮಾರ್ ಸೇರಿ ಆರು ಮಂದಿಯನ್ನು ಬಂಧಿಸಿದ್ದರೆ. ಸದ್ಯ ಅಡ್ಡದಾರಿಯಲ್ಲಿ ಹಣ ಮಾಡಲು ಹೋದ ಖದೀಮರು ಪೊಲೀಸರ ಅತಿಥಿಯಾಗಿದ್ದಾರೆ.

 

error: Content is protected !!

Join the Group

Join WhatsApp Group