ಲಾಕ್‌ಡೌನ್‌ ಸಡಿಲಿಕೆ ➤ 5 ರಾಜ್ಯಗಳಿಗೆ KSRTC ಸೇವೆ ಪುನಾರಂಭ

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 08: ಕೊವೀಡ್ 19 ಗೆ, ಎಲ್ಲವೂ ಸ್ತಭ್ಧವಾಗಿ, ಕೆಲಸ, ಕಾರ್ಯ, ಸಂಚಾರಗಳು ಸ್ಥಗಿತ ಗೊಂಡಿದ್ದವು.ಬಳಿಕ ಸರ್ಕಾರ ಹಂತ ಹಂತವಾಗಿ ಲಾಕ್ ಡೌನ್‍ನಲ್ಲಿ ರಿಲೀಫ್ ನೀಡುತ್ತ ಬಂದಿದೆ. ಲಾಕ್‌ಡೌನ್‌ ಸಡಿಲಿಕೆ ಬಳಿಕ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(KSRTC) ಈಗಾಗಲೇ ಐದು ರಾಜ್ಯಗಳಿಗೆ ಅಂತರ್‌ ರಾಜ್ಯ ಬಸ್‌ ಸೇವೆ ಪುನರಾರಂಭಿಸಿದೆ.

ಪ್ರಸ್ತುತ ನಿತ್ಯ 300 ಬಸ್‌ಗಳು ಸಂಚರಿಸುತ್ತಿವೆ. ಬಸ್‌ ಸೇವೆ ಆರಂಭಿಸುವ ಸಂಬಂಧ ರಾಜ್ಯ ಸರ್ಕಾರದ ಮನವಿಗೆ ಮಹಾ​ರಾಷ್ಟ್ರ, ಆಂಧ್ರಪ್ರದೇಶ, ಗೋವಾ, ತೆಲಂಗಾಣ ಹಾಗೂ ಕೇರಳ ರಾಜ್ಯಗಳು ಅನುಮತಿ ನೀಡಿದ ನಂತರ ಬಸ್‌ ಸೇವೆ ಆರಂಭಿಸಲಾಗಿದೆ. ಆದರೆ, ತಮಿಳುನಾಡು ಹಾಗೂ ಪಾಂಡಿಚೇರಿ ರಾಜ್ಯಗಳು ನವೆಂಬರ್‌ ವೇಳೆಗೆ ಅನುಮತಿ ನೀಡುವ ನಿರೀಕ್ಷೆಯಿದೆ. ಹೀಗಾಗಿ ಈ ಎರಡೂ ರಾಜ್ಯಗಳಿಗೂ ಬಸ್‌ ಸೇವೆ ಪುನಾರಂಭಿಸಲು ನಿಗಮ ಸಿದ್ಧತೆ ನಡೆಸಿದೆ.

error: Content is protected !!

Join the Group

Join WhatsApp Group