ಕಾಟಿಪಳ್ಳ: ಬ್ಲಡ್ ಹೆಲ್ಪ್ ಕೇರ್ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರ

(ನ್ಯೂಸ್ ಕಡಬ) newskadaba.com ಕಾಟಿಪಳ್ಳ, ಅ. 07. ಜಾತಿ ಜಾತಿಯ ಮಧ್ಯೆ ಇರುವ ಕಲಹ, ಕಚ್ಚಾಟ, ದ್ವೇಷ, ಹಗೆತನ, ದೂರಮಾಡುವ ಮಹತ್ವ ಕಾರ್ಯ ರಕ್ತದಾನ. ಯುವ ಪೀಳಿಗೆ ಅರ್ಥೈಸಿಕೊಂಡು ರಕ್ತದಾನ ಮಾಡುವ ಮೂಲಕ ಸಾಮರಸ್ಯದ ಜೀವನ ನಡೆಸಿರಿ ಎಂದು ಪಣಂಬೂರು ಕಾಟಿಪಳ್ಳ ಮುಸ್ಲಿಂ ಜಮಾಅತ್ ಖತೀಬರಾದ ಅಬ್ದುಲ್ ನಾಸರ್ ಮದನಿ ಹೇಳಿದರು.


ಅವರು ಆದಿತ್ಯವಾರದಂದು ರಿಲಯನ್ಸ್ ಯೂತ್‌ ಅಸೋಸಿಯೇಷನ್ (ರಿ) ಕಾಟಿಪಳ್ಳ, ಅಝಾದ್ ಯೂತ್ ಕೌನ್ಸಿಲ್ ಕಾಟಿಪಳ್ಳ (ರಿ)ಹಾಗೂ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ)ಇದರ ಆಶ್ರಯದಲ್ಲಿ ಕೆಎಂಸಿ ಹಾಸ್ಪಿಟಲ್ ಮಂಗಳೂರು ಇದರ ಸಹಕಾರದಲ್ಲಿ ಆಯೋಜಿಸಿದ ಕಾಟಿಪಳ್ಳ ಎರಡನೇ ಬ್ಲಾಕ್ ಜಾಸ್ಮೀನ್ ಮಹಲ್ ನಲ್ಲಿ ಜರಗಿದ ಎಪ್ಪತ್ತನೇ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕರಾದ ಮೊಐದಿನ್ ಬಾವ ವಹಿಸಿದ್ದರು. ‌ವೇದಿಕೆಯಲ್ಲಿ ಅಹ್ಮದ್ ಬಾವ, ಅಯ್ಯೂಬ್, ಪಿ.ಎ ಇಲ್ಯಾಸ್, ಅರವಿಂದ್ ಭಟ್, ಪಿ.ಎಚ್. ಇದಿನಬ್ಬ, ಪಿ.ಹುಸೈನ್, ಸಲೀಂ, ರಝಾಕ್, ಅಶ್ಪಾಕ್ ಅಹ್ಮದ್, ಮಹಮ್ಮದ್ ಅಲಿ, ತೌಸೀಪ್ ಅಹ್ಮದ್, ಹಂಝ, ಟಿ.ರಾಘವೇಂದ್ರ, ಅಬ್ದುಲ್ಖಾದರ್,
ಪಿ.ಯಂ. ಝೈನುದ್ದೀನ್ ಬ್ಲಡ್ ಹೆಲ್ಪ್ ಕೇರ್ ಗೌರವಾಧ್ಯಕ್ಷ ಇಪ್ತಿಕಾರ್ ಅಹ್ಮದ್, ಅಝಾದ್ ಯೂತ್‌ ಕೌನ್ಸಿಲ್ ಅದ್ಯಕ್ಷರಾದ ಉಮ್ಮರ್ ಫಾರೂಕ್ ಉಪಸ್ಥಿತರಿದ್ದರು. ಸೈಫುಲ್ಲಾ ಮೊಹಿದಿನ್ ಸ್ವಾಗತಿಸಿದರು.
ಶಂಸುದ್ದೀನ್ ಬಲ್ಕುಂಜೆ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

Also Read  ರಾಜ್ಯದಲ್ಲಿ ಸಂಭ್ರಮದ ಗಣರಾಜ್ಯೋತ್ಸವ: ರಾಜ್ಯಪಾಲರಿಂದ ಧ್ವಜಾರೋಹಣ

error: Content is protected !!
Scroll to Top