ಅಟಲ್ ಸರಂಗದಲ್ಲಿ 72 ಗಂಟೆಗಳಲ್ಲಿ 3 ಅಪಘಾತ..! ➤ ಕಾರಣವೇನು ಗೊತ್ತೆ?!!

(ನ್ಯೂಸ್ ಕಡಬ) newskadaba.com ರೋಹ್ಟಾಂಗ್, ಅ. 06: ಅಟಲ್​ ಸುರಂಗ ಮಾರ್ಗದಲ್ಲಿ ಕಳೆದ 72 ಗಂಟೆಗಳಲ್ಲಿ ಮೂರು ಅಪಘಾತಗಳು ಸಂಭವಿಸಿದೆ ಎಂದು ಮಂಗಳವಾರ ವರದಿಯಾಗಿದೆ. ಹಿಮಾಚಲ ಪ್ರದೇಶದ ರೋಹ್ಟಾಂಗ್​ನಲ್ಲಿ ನಿರ್ಮಿತವಾಗಿರುವ ವಿಶ್ವದಲ್ಲೇ ಅತಿ ಉದ್ದದ ಅಟಲ್​ ಸುರಂಗವೂ ಮನಾಲಿ ಮತ್ತು ಲೇಹ್​ ನಡುವೆ 46 ಕಿ.ಮೀ ಅಂತರವನ್ನು ತಗ್ಗಿಸಲಿದೆ.

 

ಅಪಘಾತಗಳೆಲ್ಲವೂ ನಿರ್ಲಕ್ಷ್ಯ ಮತ್ತು ವೇಗದ ಪ್ರಯಾಣದಿಂದಲೇ ಸಂಭವಿಸಿದ್ದು, ಸುರಂಗ ಮಾರ್ಗವೂ ತೆರೆದಾಗಿನಿಂದ ಪ್ರವಾಸಿಗರ ಅಸಭ್ಯ ವರ್ತನೆ ಗಮನಕ್ಕೆ ಬಂದಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕುದುರೆಯ ಲಾಳಾಕಾರದಲ್ಲಿ ನಿರ್ಮಿಸಲಾಗಿರುವ ಅದ್ಭುತ ಸುರಂಗವೂ ಹೊಸ ಪ್ರವಾಸಿ ತಾಣವಾಗಿ ಮಾರ್ಪಾಡಾಗಿದೆ. ಹೀಗಾಗಿ ಉದ್ಘಾಟನೆಗೊಂಡ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ.ಕೇವಲ ಮೂರೇ ದಿನದಲ್ಲಿ ಮೂರು ಅಪಘಾತಗಳು ಸಂಭವಿಸಿವೆ. ಅಪಘಾತಗಳು ಗಡಿ ರಸ್ತೆಗಳ ಸಂಸ್ಥೆ (ಬಿಆರ್​ಒ) ಮತ್ತು ಜಿಲ್ಲಾಡಳಿತದ ಕಳವಳಕ್ಕೆ ಕಾರಣವಾಗಿದೆ.

Also Read  ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ➤ ಎಸ್ಎಸ್ಎಲ್‌ಸಿ ಪಾಸ್ ಅಂಕಗಳನ್ನು 28 ರಿಂದ 20ಕ್ಕೆ ಇಳಿಸಿ ಕರ್ನಾಟಕ ಸರ್ಕಾರಕ್ಕೆ ಸಮಿತಿ ಶಿಫಾರಸು

 

ನೂರಾರು ಪ್ರವಾಸಿಗರು ಮತ್ತು ಮೋಟರಿಸ್ಟ್​ಗಳು ಅತಿವೇಗದಲ್ಲಿ ಚಲಿಸುವುದಲ್ಲದೇ ಹೊಸ ಸುರಂಗ ಮಾರ್ಗದಲ್ಲಿ ರೇಸಿಂಗ್​ ಮಾಡುತ್ತಿರುವುದು ಅಧಿಕಾರಿಗಳಿಗೆ ಹೊಸ ತಲೆ ನೋವಾಗಿದೆ. ಮೂರು ಅಪಘಾತಗಳು ಸಹ ಒಂದೇ ದಿನದಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಅಲ್ಲದೆ, ಪ್ರವಾಸಿಗರು ಸವಾರಿಯ ನಡುವೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಮುಲಕ ಸಂಚಾರಿ ನಿಯಮಗಳನ್ನು ಸಂಪೂರ್ಣ ಗಾಳಿಗೆ ತೂರುತ್ತಿದ್ದಾರೆಂದು ಬಿಆರ್​ಒ ಚೀಫ್​ ಇಂಜಿನಿಯರ್​ ಬ್ರಿಗೇಡಿಯರ್​ ಕೆ.ಪಿ. ಪುರುಷೋತ್ತಮನ್​ ಅಸಮಾಧಾನ ಹೊರಹಾಕಿದ್ದಾರೆ. ಪ್ರವಾಸಿಗರು ತಮ್ಮ ಮಿತಿಯನ್ನು ಮೀರುತ್ತಿರುವುದರಿಂದ ಅಟಲ್​ ಸುರಂಗದಲ್ಲಿ ವಾಹನಗಳ ನಿಲುಗಡೆಗೆ ಯಾರಿಗೂ ಅನುಮತಿ ಇಲ್ಲ ಎಂದಿದ್ದಾರೆ. ನಿಯಮ ಮೀರಿದರೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.

Also Read  ಮಂಗಗಳ ಪಾಲಾದ ಕೊರೊನಾ ಪರೀಕ್ಷಾ ಮಾದರಿಗಳು..!!! ➤ ರೋಗ ಹರಡುವ ಭೀತಿಯಲ್ಲಿ ಜನತೆ

 

 

error: Content is protected !!
Scroll to Top