ಕಾಸರಗೋಡು : ಜಿಲ್ಲಾಧಿಕಾರಿಯ ನಿವಾಸದ ಸಮೀಪ ಶ್ರೀಗಂಧ ಸಾಗಾಟಕ್ಕೆ ಯತ್ನ..!!

(ನ್ಯೂಸ್ ಕಡಬ) newskadaba.com ಕಾಸರಗೋಡು , ಅ. 06: ಕಾಸರಗೋಡು ಜಿಲ್ಲಾಧಿಕಾರಿಯ ನಿವಾಸದ ಸಮೀಪ ಇರುವ ನಿವಾಸದಲ್ಲಿ ಸುಮಾರು 2.5 ಕೋಟಿ ರೂ ಮೌಲ್ಯ ಶ್ರೀಗಂಧವನ್ನು ವಶಪಡಿಸಿಕೊಳ್ಳಲಾಗಿದ್ದು, ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿವಾಸಗಳಿಗೆ ಹತ್ತಿರವಿರುವ ಮನೆಯಲ್ಲಿ ಅಕ್ರಮ ಚಟುವಟಿಕೆ ಬೆಳಕಿಗೆ ಬಂದಿದೆ.

ಮುಂಜಾನೆ 4.30 ರ ಸುಮಾರಿಗೆ ನಿಲ್ಲಿಸಿದ ಟ್ರಕ್‌ಗೆ ಶ್ರೀಗಂಧದ ತುಂಡುಗಳನ್ನು ತುಂಬುತ್ತಿರುವುದನ್ನು ಕಂಡು ಬಂದಿದೆ. ಕೂಡಲೇ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದ್ದು ಸ್ಥಳಕ್ಕೆ ತಲುಪಿದ ಜಿಲ್ಲಾಧಿಕಾರಿ, ಪೊಲೀಸರ ಸಹಾಯದೊಂದಿಗೆ ಅಕ್ರಮ ಸಾಗಾಟವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು 30 ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿದ ಶ್ರೀಗಂಧದ ತುಂಡುಗಳನ್ನು ಟ್ರಕ್‌ನಲ್ಲಿ ತುಂಬಿಸಲಾಗಿತ್ತು. ಸಿಮೆಂಟ್‌ ಸಾಗಾಟ ಮಾಡುವ ಈ ಟ್ರಕ್‌ನಲ್ಲಿ ಶ್ರೀಗಂಧವನ್ನು ಇರಿಸಲು ಟ್ರಕ್‌ನ ಲಗೇಜ್ ಇಡುವ ಸ್ಥಳದಲ್ಲಿ ವಿಶೇಷ ಕ್ಯಾಬಿನ್‌ನ್ನು ರಚಿಸಲಾಗಿತ್ತು. ದಾಳಿ ವೇಳೆ ಮನೆಯ ಮಾಲೀಕರು ಮತ್ತು ಆರೋಪಿಗಳು ಪರಾರಿಯಾಗಿದ್ದಾರೆ.ಶ್ರೀಗಂಧವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Also Read  ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳೇ ಗಮನಿಸಿ.!    ➤  ಪ್ರೋತ್ಸಾಹಧನಕ್ಕಾಗಿ ಆನ್ ಲೈನ್ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ

 

error: Content is protected !!
Scroll to Top