ಜಿ. ಪಂ. ಸದಸ್ಯನಿಂದ ಬಾಕ್ಸೈಟ್ ಸಾಗಾಟ ➤ ಪೊಲೀಸರ ದಾಳಿ, ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಬೈಂದೂರು, ಸೆ. 30. ಬೈಂದೂರು ಒತ್ತಿನೆಣೆಯ ಸೆಳ್ಳೆಕುಳ್ಳಿ ಎಂಬ ಪ್ರದೇಶದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರ ಜಾಗದಲ್ಲಿ ಅಕ್ರಮವಾಗಿ ಬಾಕ್ಸೈಟ್ ಅಗೆದು ಸಾಗಾಟ ಮಾಡುತ್ತಿದ್ದ ಪ್ರದೇಶಕ್ಕೆ ಬೈಂದೂರು ಪೊಲೀಸರು ದಾಳಿ ನಡೆಸಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಈ ಭಾಗದಲ್ಲಿ ನಿಷೇಧಿತ ಬಾಕ್ಸೈಟ್ ಅದಿರನ್ನು ಅಗೆಸು ಅಕ್ರಮವಾಗಿ ಸಾಗಿಸಲಗುತ್ತಿತ್ತು ಎನ್ನಲಾಗಿದೆ. ಜಿಲ್ಲಾ ಪಂಚಾಯತ್ ಸದಸ್ಯ ಬಟ್ಟಾಡಿ ಅವರ ಜಾಗದಲ್ಲಿ ಈ ಬಾಕ್ಸೈಟ್‍ನ್ನು ಶ್ರೀ ಕಾಮತ್ ಶೆಟ್ಟಿ ಕಳೆದ ಒಂದು ತಿಂಗಳಿನಿಂದ ಅಗೆದು ಆಂದ್ರಪ್ರದೇಶದ ಸಿಮೆಂಟ್ ಕಂಪನಿಗೆ ಗಣಿ ಇಲಾಖೆಯಿಂದ ಯಾವುದೇ ಅನುಮತಿ ಇಲ್ಲದೆ ಸಾಗಾಟ ಮಾಡುತ್ತಿದ್ದರು ಎಂಬ ದೂರು ಕೇಳಿ ಬಂದಿದೆ.

ಇಂದು ಬೆಳಗ್ಗೆ ಬೈಂದೂರು ಎಸ್‍ಸೈ ಕುಮಾರಿ ಸಂಗೀತಾ ಅವರ ನೇತೃತ್ವದಲ್ಲಿ , ಅಕ್ರಮ ಬಾಕ್ಸೈಟ್ ಸಾಗಾಟ ಮಡುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ ಎರಡು ಲಾರಿ ಮತ್ತು ಹಿಟಾಚಿ ಯಂತ್ರ ವಶಕ್ಕೆ ಪಡೆದುಕೊಂಡಿದ್ಧಾರೆ.  ಇನ್ನು ಘಟನಾ ಸ್ಥಳಕ್ಕೆ ಗಣಿ ಇಲಾಖೆಯವರು ಭೇಟಿ ನೀಡಿ ಪರಿಶೀಲಿಸಿ 30 ಲಕ್ಷದ ಮೆಟ್ರಿಕ್ ಟನ್ ಬಾಕ್ಸೈಟ್ ವಶಪಡಿಸಿಕೊಂಡಿದ್ದರೆ. ಜೊತೆಗೆ ಒಂದೂವರೆ ಲಕ್ಷ ರೂ. ದಂಡ ವಿಧಿಸಿದ್ದಾರೆ.

Also Read   ಐವರು  ಪೊಲೀಸ್ ಸಿಬ್ಬಂದಿಗಳಿಗೆ ಕೊರೊನಾ ದೃಢ➤ ಮೂಡಬಿದಿರೆ ಪೊಲೀಸ್ ಠಾಣೆ ಸೀಲ್ ಡೌನ್... !!!

 

 

error: Content is protected !!
Scroll to Top