ಗುತ್ತಿಗಾರು : ಅಕ್ರಮ ಗೋ ಸಾಗಾಟ, ಆರೋಪಿಗಳು ಪೊಲೀಸರ ವಶಕ್ಕೆ.!!

(ನ್ಯೂಸ್ ಕಡಬ) newskadaba.com ಗುತ್ತಿಗಾರು , ಸೆ. 28:  ಗುತ್ತಿಗಾರಿನ ಕಡ್ತಲ್ ಕಜೆ ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ವಾಹನವನ್ನು ಕಳೆದ ದಿನ ರಾತ್ರಿ ಪತ್ತೆ ಹಚ್ಚಲಾಗಿದೆ.

ಪಿಕಪ್ ವಾಹನದಲ್ಲಿ ಮೂರು ಗೋವುಗಳನ್ನು ಸಾಗಿಸಲಾಗುತಿತ್ತು. ಕೊಲ್ಲಮೊಗ್ರದಿಂದ ತರಲಾಗಿತ್ತೆನ್ನಲಾಗಿದೆ. ಗುತ್ತಿಗಾರಿನ ಭಜರಂಗದಳದ ಭಗತ್ ಸಿಂಗ್ ಶಾಖೆ ಹಾಗೂ ಹಿಂದೂ ಜಾಗರಣ ವೇದಿಕೆಯವರು ತಡೆ ಹಿಡಿದು ವಿಚಾರಿಸಿದಾಗ ಯಾವುದೇ ದಾಖಲೆಗಳಿಲ್ಲದ್ದು ಕಂಡು ಬಂದಿದೆ. ಬಳಿಕೆ ಸುಬ್ರಹ್ಮಣ್ಯ ಪೊಲೀಸರಿಗೆ ಮಾಹಿತಿ ನೀಡಿ, ಗೋವು ಮತ್ತು ಆರೋಪಿಗಳನ್ನು ಪೊಲೀಸರ ವಶಕ್ಕೆ ನೀಡಲಾಗಿದೆ ತಿಳಿದು ಬಂದಿದೆ.

Also Read  ಪ್ರಸಾದದೊಂದಿಗೆ ದರ್ಶನ್ ಭೇಟಿಗೆ ಬಂದ ಪತ್ನಿ ವಿಜಯಲಕ್ಷ್ಮೀ

 

 

error: Content is protected !!
Scroll to Top