ನೆಲ್ಯಾಡಿ ಎಸ್ಡಿಪಿಐ ವಲಯ ವತಿಯಿಂದ ಬಿಜೆಪಿ ಸರಕಾರ ಜಾರಿಗೊಳಿಸಿದ ರೈತ ವಿರೋಧಿ ಸುಗ್ರೀವಾಜ್ಞೆಗಳ ವಿರುದ್ದ ಪ್ರತಿಭಟನೆ

(ನ್ಯೂಸ್ ಕಡಬ)newskadaba.com ನೆಲ್ಯಾಡಿ, ಸೆ. 25. ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ನೆಲ್ಯಾಡಿ ವಲಯ ಇದರ ವತಿಯಿಂದ ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರಕಾರ ಜಾರಿಗೊಳಿಸಿದ ರೈತ ವಿರೋಧಿ ಸುಗ್ರೀವಾಜ್ಞೆಗಳ ವಿರುದ್ಧ ನೆಲ್ಯಾಡಿ ಸಾಗರ್ ಹೋಟೆಲ್ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.

ಎಸ್.ಡಿ.ಪಿ.ಐ ಕಡಬ ತಾಲೂಕು ಸಮಿತಿ ಕಾರ್ಯದರ್ಶಿಯಾದ ರಫೀಕ್ ನೆಲ್ಯಾಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಎಲ್ಲರನ್ನೂ ಸ್ವಾಗತಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಉಪ್ಪಿನಂಗಡಿ ಎಸ್ಡಿಪಿಐ ನಿಕಟ ಪೂರ್ವ ವಲಯಾಧ್ಯಕ್ಷರಾದ ಸೀಮಾ ರಜಾಕ್ ಮಾತನಾಡಿದರು.

ಪ್ರತಿಭಟನಾಕಾರರು ಬಿಜೆಪಿ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಸರಕಾರದ ರೈತ ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲಾಯಿತು. ಈ ಕಾರ್ಯಕ್ರಮವನ್ನು
ಸಿದ್ದಿಕ್ ನೆಲ್ಯಾಡಿ ನಿರೂಪಿಸಿ ವಂದಿಸಿದರು.

Also Read  ದ.ಕ ಜಿಲ್ಲಾ ಮಟ್ಟದ 21 ಉತ್ತಮ ಶಿಕ್ಷಕರಿಗೆ ಪ್ರಶಸ್ತಿ

error: Content is protected !!
Scroll to Top