ಹಿರಿಯ ಯಕ್ಷಗಾನ ಭಾಗವತ “ಕಂಚಿನ ಕಂಠದ” ತಿರುಮಲೇಶ್ವರ ಶಾಸ್ತ್ರಿ ಇನ್ನಿಲ್ಲ

(ನ್ಯೂಸ್ ಕಡಬ) newskadaba.com ಮಂಗಳೂರು , ಸೆ. 25:  ಹಿರಿಯ ಯಕ್ಷಗಾನ ಭಾಗವತ, ತಮ್ಮ ಕಂಚಿನ ಕಂಠದಿಂದ ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆಗೈದು ಪ್ರಸಿದ್ಧರಾಗಿದ್ದ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳು ನಿಧನರಾಗಿದ್ದಾರೆ.

 

 

ಬಂಟ್ವಾಳ ತಾಲೂಕಿನ ಕರೋಪಾಡಿ ಬಳಿತೆಂಕಬೈಲು ನಿವಾಸಿಯಾಗಿದ್ದ ಅವರ ವೃದಿಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು.
ಅನಾರೋಗ್ಯದಿಂದ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆಗೆ ಸ್ಪಂಧಿಸದೆ ವಿಧಿವಶರಾಗಿದ್ದಾರೆ. ತನ್ನಭಾಗವತಿಕೆಯಿಂದಲೇ ಜನಮನ ಸೆಳೆದಿದ್ದ ಇವರು ಸುಮಾರು 25 ವರ್ಷಗಳ ಕಾಲ ಮೇಳಗಳಲ್ಲಿ ತಿರುಗಾಟ ನಡೆಸಿದ್ದಾರೆ.

Also Read  ಕಡಬ : ನೂತನ ಸಂಸ್ಥೆ ಜೆ.ಎಸ್. ಸ್ಪೋರ್ಟ್ಸ್ & ಪ್ರಿಂಟ್ ಟೆಕ್ನಿಕ್ ಶುಭಾರಂಭ

error: Content is protected !!
Scroll to Top