ಉಪ್ಪಿನಂಗಡಿ: ಅಂಗನವಾಡಿ ಕೇಂದ್ರದ ಬಳಿ ಅಪಾಯಕಾರಿ ವಿದ್ಯುತ್ ತಂತಿ ಸಂಪರ್ಕ ➤ ಎಸ್.ಡಿ.ಪಿ.ಐ ಪೆರಿಯಡ್ಕ ಬ್ರಾಂಚ್ ವತಿಯಿಂದ ಮೆಸ್ಕಾಂ ಮನವಿ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಸೆ. 23. ಪೆರಿಯಡ್ಕ ಸಮೀಪದ ನೆಡ್ಚಿಲ್ ಅಂಗನವಾಡಿ ಕೇಂದ್ರದ ಮೇಲ್ಬಾಗದಲ್ಲಿ ಅಪಾಯಕಾರಿ ವಿದ್ಯುತ್ ತಂತಿ ಹಾದು ಹೋಗಿದ್ದು, ಇದರಿಂದಾಗಿ ಮಕ್ಕಳ ಜೀವಕ್ಕೆ ಅಪಾಯ ಒದಗುವ ಮುನ್ನ ಸ್ಥಳಾಂತರ ಮಾಡಬೇಕೆಂದು ಎಸ್ಡಿಪಿಐ ಪೆರಿಯಡ್ಕ ಬ್ರಾಂಚ್ ವತಿಯಿಂದ ಮೆಸ್ಕಾಂ ಕಛೇರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಎಸ್ಡಿಪಿಐ ಉಪ್ಪಿನಂಗಡಿ ವಲಯಾಧ್ಯಕ್ಷರಾದ ಮುಸ್ತಫಾ ಲತೀಫಿ ಮಾತನಾಡಿ, ನೆಡ್ಚಿಲ್ ಅಂಗನವಾಡಿ ಕೇಂದ್ರದಲ್ಲಿ ಕೊರೋನಾ ಮುಂಜಾಗ್ರತೆಗಾಗಿ ಸರಕಾರ ಮಕ್ಕಳಿಗೆ ರಜೆ ನೀಡಿದೆ. ಪುಟ್ಟ ಮಕ್ಕಳು ಮುಂದಿನ ದಿನಗಳಲ್ಲಿ ಅಂಗನವಾಡಿ ಕೇಂದ್ರಕ್ಕೆ ಬರುವಾಗ ಅಪಾಯವನ್ನು ತಡೆಯವಂತದ್ದು ಸ್ಥಳೀಯರ ಕರ್ತವ್ಯವಾಗಿದ್ದು, ಇದನ್ನು ಅರಿತು ಸುಮ್ಮನಿರಲು ಎಸ್ಡಿಪಿಐ ಪಕ್ಷದಿಂದ ಸಾಧ್ಯವಿಲ್ಲ, ಆದಷ್ಟು ಬೇಗ ತೆರವುಗೊಳಿಸಿ ಮುಂದೆ ಆಗುವಂತಹ ಅಪಾಯವನ್ನು ಮೆಸ್ಕಾಂ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಇಲಾಖೆಗಳು ಗಮನಹರಿಸಿ ಶೀಘ್ರದಲ್ಲೇ ಶಾಶ್ವತ ಪರಿಹಾರವನ್ನು ಒದಗಿಸಬೇಕು, ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟದ ಎಚ್ಚರಿಕೆಯನ್ನು ನೀಡಿದರು.

Also Read  ಜನವರಿ :16 ರಿಂದ  ಕ್ರೀಡಾಶಾಲೆ ಮತ್ತು ಕ್ರೀಡಾವಸತಿ ನಿಲಯಗಳಿಗೆ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ಆರಂಭ

ಈ ಸಂದರ್ಭದಲ್ಲಿ ಎಸ್ಡಿಪಿಐ ಉಪ್ಪಿನಂಗಡಿ ವಲಯದ ಉಪಾಧ್ಯಕ್ಷರಾದ ಅಬ್ದುಲ್ ಮಜೀದ್ ಮಠ, ಪೆರಿಯಡ್ಕ ಬ್ರಾಂಚ್ ಅಧ್ಯಕ್ಷರಾದ ಬಿ.ಕೆ ಅಬ್ದುಲ್ ರಹಿಮಾನ್, ಮೈಸೀದ್, ಅಬ್ದುಲ್ ರಝಾಕ್, ಸುಮಂತ್, ಅನ್ಸಾಫ್, ಅಶ್ರಫ್. ಪಿ, ಉಮ್ಮರ್ ಎ.ಕೆ, ಇಕ್ಬಾಲ್ ಯು.ಕೆ, ಶಂಸುದ್ದೀನ್, ಅಬ್ದುಲ್ ಹಕೀಂ, ರಶೀದ್ ಮಠ, ಮುಸ್ತಫಾ ಪಿ.ಎಚ್ ಹೀಗೆ ಹಲವರು ನಿಯೋಗದಲ್ಲಿ ಉಪಸ್ಥಿತರಿದ್ದರು.

error: Content is protected !!
Scroll to Top