ಪುತ್ತೂರು: ಗಾಂಜಾ ಮಾರಾಟಕ್ಕೆ ಯತ್ನ – ಓರ್ವನ ಬಂಧನ, ಮತ್ತೋರ್ವ ಪರಾರಿ

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ‌. 23. ವ್ಯಕ್ತಿಗಳಿಬ್ಬರು ಕಪ್ಪು ಬಣ್ಣದ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಗಾಂಜಾ ಮಾರಾಟ ಮಾಡಲೆತ್ನಿಸುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು ಒಬ್ಬನನ್ನು ಬಂಧಿಸಿದ ಘಟನೆ ತಾಲೂಕಿನ ಕೆಮ್ಮಿಂಜೆ ಗ್ರಾಮದ ನೈತಾಡಿ -ಬೆದ್ರಾಳ ನಡುವೆ ಸಂಭವಿಸಿದೆ.

 


ಕಾರ್ಯಾಚರಣೆಯ ವೇಳೆ ಪರಾರಿಯಾಗಲು ಯತ್ನಿಸಿದ್ದ ಆರೋಪಿಗಳನ್ನು ಬೆನ್ನಟ್ಟಿ ಹಿಡಿಯಲಾಗಿದ್ದು, ವಿಚಾರಣೆ ನಡೆಸಿದಾಗ ಓರ್ವ ನರಿಮೊಗರು ಗ್ರಾಮದ ಸಾಝಿಲ್ ಅಹಮ್ಮದ್ (24) ಇನ್ನೋರ್ವ ಪರಾರಿಯಾಗಿದ್ದು, ಆತನನ್ನು ಕೆಮ್ಮಿಂಜೆ ಗ್ರಾಮದ ಮಹಮ್ಮದ್ ಅಶ್ರಫ್ ಎಂದು ತಿಳಿದು ಬಂದಿದೆ.

ಬಂಧಿತ ಆರೋಪಿಯನ್ನು ಮತ್ತು ಆತನ ಬಳಿಯಿದ್ದ ದ್ವಿಚಕ್ರ ವಾಹನನ್ನು ತಪಾಸಣೆ ನಡೆಸಿ, ಆತನಿಂದ ಸುಮಾರು ರೂ. 3,000 ಮೌಲ್ಯದ 166 ಗ್ರಾಂ. ಗಾಂಜಾ, ಸುಮಾರು ರೂ. 40,000 ಮೌಲ್ಯದ ದ್ವಿಚಕ್ರ ವಾಹನ ಮತ್ತು ಸುಮಾರು ರೂ. 12,000 ಮೌಲ್ಯದ ಮೊಬೈಲ್ ಪೋನ್ ಅನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Also Read  ಇನ್ಮುಂದೆ ಗ್ರಾಮೀಣ ಪ್ರದೇಶಗಳಲ್ಲಿ ನಡೆಯಲ್ಲ `SSLC' ಪರೀಕ್ಷೆ

error: Content is protected !!
Scroll to Top