ಮಂಗಳೂರು – ದೆಹಲಿ ನಡುವೆ ವಿಮಾನ ಸೇವೆ ಆರಂಭ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 22: ಲಾಕ್‌ಡೌನ್ ಸಡಿಲಿಕೆ ಮಾಡಿದರೂ ಕೆಲವೊಂದು ಉದ್ಯಮಗಳು ಚೇತರಿಸಿಕೊಂಡಿಲ್ಲ. ಲಾಕ್‌ಡೌನ್‌ನಿಂದ ಜನ ಚೇತರಿಕೆ ಹಂತದಲ್ಲೇ ಇದ್ದಾರೆ. ಇನ್ನು ಈ ಮಧ್ಯೆ ಲಾಕ್‌ಡೌನ್ ತೆರವಿನಿಂದ ಒಂದೊಂದೇ ಉದ್ಯಮಗಳು ಓಪನ್ ಆಗುತ್ತಿವೆ. ಇದರಲ್ಲಿ ವಿಮಾನಯಾನ ಕೂಡ ಒಂದು. ಇಂದಿನಿಂದ ಮಂಗಳೂರು-ನವದೆಹಲಿಗೆ ವಿಮಾನಯಾನ ಆರಂಭಗೊಂಡಿದೆ.

 

ಸ್ಪೈಸ್ ಜೆಟ್ ಸಂಸ್ಥೆ ಮಂಗಳೂರಿನಿಂದ ನವದೆಹಲಿಗೆ ವಿಮಾನಯಾನ ಪ್ರಾರಂಭಿಸುವ ಮೂಲಕ ಪ್ರಯಾಣಿಕರಿಗೆ ಅನುವು ಮಾಡಿಕೊಟ್ಟಿದೆ.ಇಂದು ಬೆಳಗ್ಗೆ ನವದೆಹಲಿಯಿಂದ ಟೇಕ್ ಆಫ್ ಆಗಿರುವ ವಿಮಾನ ಮಧ್ಯಾಹ್ನ 12.35 ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದೆ. ಇನ್ನು ಇದೇ ವಿಮಾನ ಮಧ್ಯಾಹ್ನ 1.10ಕ್ಕೆ ಮಂಗಳೂರಿನಿಂದ ದೆಹಲಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಲಿದೆ. ಈ ವಿಮಾನ ಸೇವೆ ಮಂಗಳವಾರ ಮತ್ತು ಭಾನುವಾರ ಮಾತ್ರ ಇರಲಿದೆ.

Also Read  ➤ನೂತನ ವಿಶ್ವವಿದ್ಯಾಲಯ ಉದ್ಘಾಟಿಸಿದ ಸಿಎಂ ಬಸವರಾಜ ಬೊಮ್ಮಾಯಿ

error: Content is protected !!
Scroll to Top