(ನ್ಯೂಸ್ ಕಡಬ) newskadaba.com ಎಡಮಂಗಲ, ಸೆ.21: ಎಡಮಂಗಲ ಗ್ರಾಮದ ಎರಿಂಬಿಲ ಮೋಹನ ಎ. ಎಂಬವರ ಪತ್ನಿ ಮಂಜುಳ(28) ರವರು ಸೆ.13 ರಂದು ಮನೆಯಿಂದ ಕಾಣೆಯಾಗಿದ್ದಾರೆ ಎಂದು ಪತಿ ಬೆಳ್ಳಾರೆ ಠಾಣೆಗೆ ದೂರು ನೀಡಿದ್ದರು.

ಇದೀಗ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಹಿಳೆಯನ್ನು ಮಂಡ್ಯದ ಬಡಾವಣೆಯಲ್ಲಿ ಪತ್ತೆ ಹಚ್ಚಿ ಸುಳ್ಯಕ್ಕೆ ಕರೆದುಕೊಂಡು ಬಂದು ಮನೆಯವರೊಂದಿಗೆ ಕಳುಹಿಸಿರುವುದಾಗಿ ತಿಳಿದು ಬಂದಿದೆ.









