ಕಾಂತ್ರಿಕಾರಿ ಸೇನೆಯ ಹೆಸರಿನಲ್ಲಿ ಹಣ ಪಡೆದು ವಂಚನೆ ➤ ಡಾ. ಪರಮೇಸ್ವರ, ರಾಜು ಹೊಸ್ಮಠ ವಿರುದ್ಧ ಮಹಿಳಯರಿಂದ ದೂರು ದಾಖಲು

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ.19:  ಕರ್ನಾಟಕ ಕ್ರಾಂತಿಕಾರಿ ಸೇನೆ ಎಂಬ ಹೆಸರಿನಲ್ಲಿ ಸದಸ್ಯತ್ವಕ್ಕಾಗಿ ಹಣ ಸಂಗ್ರಹ ಮಾಡಿರುವುದಲ್ಲದೆ ಬ್ಯಾಂಕ್ ಖಾತೆ ಹಾಗೂ ಐ ಎಫ್ ಸಿ ನಂಬರ್ ಪಡೆದಿ ವಂಚನೆ ಮಾಡಿರುವುದಾಗಿ ಆರೋಪಿಸಿ ಕರ್ನಾಟಕ ಕ್ರಾಂತಿಕಾರಿ ಸೇನೆಯ ರಾಜ್ಯಾಧ್ಯಕ್ಷ ಡಾ. ಪರಮೇಶ್ವರ ಹಾಗೂ ಕರ್ನಾಟಕ ಅಂನೇಡ್ಕರ್ ಅಪತ್ಬಾಂಧವ ಟ್ರಸ್ಟ್ ನ ಜಿಲ್ಲಾ ಮುಖಂಡ ರಾಜು ಹೊಸ್ಮಠ ವಿರುದ್ಧ ನೊಂದ ಮಹಿಳೆಯರು ಇಂದು (ಸೆ.19) ನಗರ ಠಾಣೆಗೆ ದೂರು ನೀಡಿದ್ದಾರೆ.

 

ದಲಿತ್ ಸೇವಾ ಸಮಿತಿ ಮೂಲಕ ಪರಿಚಯವಾಗಿದ್ದುಕೊಂಡ ವ್ಯಕ್ತಿ , ಸಹಾಯಧನ ನೀಡುವುದಾಗಿ ಹೇಳಿ ಮಹಿಳೆಯರಿಂದ ತಲಾ ರೂ.150ರಂತೆ ಸಂಗ್ರಹ ಮಾಡಿ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್, ಫೋಟೋ ಪಡೆದುಕೊಂಡಿದ್ದಾನೆ. ಎಂದು ಮಹಿಳೆಯರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪುತ್ತೂರಿನ ನಗರ ಠಾಣಾ ವ್ಯಾಪ್ತಿಯಲ್ಲಿ ಹಣ ಪಡೆದುಕೊಂಡು ವಂಚನೆ ಮಾಡಿರುವುದಲ್ಲ್ದೆ, ಕಡಬ ಸುಳ್ಯ ವ್ಯಾಪ್ತಿಯಲ್ಲಿಯೂ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಇದರಲ್ಲಿ ಡಾ. ಪರಮೇಶ್ವರ ಎಂಬುವರು ನಮ್ಮಿಂದ ಬ್ಯಾಂಕ್ ಖಾತೆ ನಂಬರ್ ಐಎಫ್ ಸಿ ಕೋಡ್ ಮತ್ತು ಓಟಿಪಿ ನಂಬರ್ಗಳನ್ನು ಪಡೆದುಕೊಂಡು ನಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಪಡೆದಿರುತ್ತಾರೆ ಎಂದು ವಂಚನೆಗೊಳಗಾದ ಮಹಿಳೆಯರು ದೂರು ದಾಖಲಿಸಿದ್ದಾರೆ.

error: Content is protected !!

Join the Group

Join WhatsApp Group