ಸೆಪ್ಟಂಬರ್ 21 ರಿಂದ ಶಾಲೆ ತೆರೆದರೂ ತರಗತಿ ನಡೆಯಲ್ಲ.!!➤ ಸಚಿವ ಸುರೇಶ್‌ ಕುಮಾರ್‌ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ಮೈಸೂರು, ಸೆ.18:  ಸೆಪ್ಟಂಬರ್ 21 ರಿಂದ ಶಾಲೆಗಳು ತೆರೆಯುತ್ತೇವೆ ಆದರೆ ತರಗತಿಗಳು ಪ್ರಾರಂಭವಾಗುವುದಿಲ್ಲ ಎಂದು ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಸ್ಪಷ್ಟ ಪಡಿಸಿದ್ದಾರೆ.

 

 

ಮೈಸೂರಿನ ನಜರ್​​ಬಾದ್​​ನಲ್ಲಿ ನಗರ ಕೇಂದ್ರ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದ ಅವರು, ಸೆಪ್ಟೆಂಬರ್ 21ರಿಂದ ಕೇವಲ ಶಾಲೆಗಳು ತೆರೆಯಲಿವೆ. ಆದರೆ ತರಗತಿಗಳು ಪ್ರಾರಂಭವಾಗುವುದಿಲ್ಲ. ಸೆ.30ರೊಳಗೆ 1ರಿಂದ 10ನೇ ತರಗತಿ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಮುಗಿಯಬೇಕು ಎಂದು ಹೇಳಿದರು. ಮುಂದುವರೆದ ಅವರು, ಖಾಸಗಿ ಶಾಲೆಗಳು ಕೇವಲ ಒಂದು ಅವಧಿಯ ಶುಲ್ಕವನ್ನು​ ಮಾತ್ರ ಪೋಷಕರಿಂದ ಪಡೆಯಬೇಕು. ಆಗೊಮ್ಮೆ ಸಮಸ್ಯೆಯಾದರೆ ಡಿಡಿಪಿಐ, ಬಿಇಓ ಈ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ, ಅವರಿಗೆ ಈಗಾಗಳೆ ಸರ್ಕಾರದಿಂದ ಸೂಚನೆ ಕೊಟ್ಟಿದ್ದೇವೆ. ಯಾವುದೇ ಪೋಷಕರಿಗೆ ಇದರಿಂದ ಸಮಸ್ಯೆಯಾದರೆ ಕೂಡಲೇ ಬಿಇಓ ಅವರನ್ನು ಸಂಪರ್ಕಿಸಿ ಎಂದು ತಿಳಿಸಿದರು. ಇದೇ ವೇಳೆ, ರಾಜ್ಯದಲ್ಲಿ ಸಕಾರಾತ್ಮಕ ಬೆಳವಣಿಗೆ ಆಗುತ್ತಿದೆ ಎಂದು ಸುರೇಶ್​ ಕುಮಾರ್ ಸಂತಸ ವ್ಯಕ್ತಪಡಿಸಿದರು.

Also Read  ಅಕ್ರಮ ಮರಳುಗಾರಿಕೆಯ ವಿರುದ್ಧ ಮುಂದುವರಿದ ಕಾರ್ಯಾಚರಣೆ ► ಬೃಹತ್ ಅಕ್ರಮ ಮರಳು ದಾಸ್ತಾನು ಪತ್ತೆ, 5 ಘಟಕಗಳಿಗೆ ಬೀಗ

 

 

error: Content is protected !!
Scroll to Top