ರಾಜ್ಯದ ಮೊದಲ ಕಿಸಾನ್ ರೈಲು ಸಂಚಾರಕ್ಕೆ ಸಿದ್ಧ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ.16:  ರಾಜ್ಯದ ಮೊದಲ ಕಿಸಾನ್ ರೈಲು ಸೇವೆ ಸೆ. 19ರಂದು ಆರಂಭಗೊಳ್ಳಲಿದ್ದು, ಬೆಂಗಳೂರಿನಿಂದ ದೆಹಲಿ ನಡುವೆ ಸಂಚರಿಸಲಿದೆ. ಪ್ರಸಕ್ತ ಸಾಲಿನ ಕೇಂದ್ರ ಬಜೆಟ್​ನಲ್ಲಿ ಘೋಷಿಸಿದಂತೆ ಕೃಷಿ ಉತ್ಪನ್ನಗಳನ್ನು ಸಾಗಿಸುವುದಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಚಾಲನೆ ಪಡೆದುಕೊಂಡಿರುವ ಕಿಸಾನ್ ರೈಲು ಈಗಾಗಲೇ ಉತ್ತರ ಭಾರತದ ಹಲವು ನಗರಗಳಲ್ಲಿ ಸೇವೆ ಆರಂಭಿಸಿದೆ.

ಈ ರೈಲಲ್ಲಿ ಕೃಷಿ ಉತ್ಪನ್ನಗಳಾದ ಕ್ಯಾಬೇಜ್, ಕ್ಯಾಪ್ಸಿಕಂ, ಮೆಣಸಿನಕಾಯಿ, ಇನ್ನಿತರ ಆಹಾರ ಪದಾರ್ಥಗಳನ್ನು ಸರಬರಾಜು ಮಾಡಬಹುದಾಗಿದೆ. ಅದರ ಜತೆಗೆ ಹಾಲು, ಮಾಂಸ, ಮೀನು ಸೇರಿದಂತೆ ಬೇಗನೆ ಕೆಡಬಲ್ಲ ಪದಾರ್ಥಗಳನ್ನೂ ಸಾಗಿ ಸಬಹುದಾಗಿದೆ. ಅದಕ್ಕಾಗಿ ಕೋಲ್ಡ್ ಸ್ಟೋರೇಜ್ ಬೋಗಿಗಳನ್ನು ಅಳವಡಿಸಲಾಗಿದೆ.

Also Read  ಸರಿಗಮಪ ಸೀಸನ್ 17ರ ಚಾಂಪಿಯನ್ ಆಗಿ ಹೊರಹೊಮ್ಮಿದ ಶ್ರೀನಿಧಿ ಶಾಸ್ತ್ರಿ

 

error: Content is protected !!
Scroll to Top