(ನ್ಯೂಸ್ ಕಡಬ) newskadaba.com ನವದೆಹಲಿ, ಸೆ.16: ಕೊರೊನಾ ಲಸಿಕೆಯ ವೈದ್ಯಕೀಯ ಪ್ರಯೋಗವನ್ನು ಮತ್ತೆ ಆರಂಭಿಸಲು ಸೇರಂ ಇನ್ಸ್ಟಿಟ್ಯೂಟ್ ಗೆ ಡಿಸಿಜಿಐ ಅನುಮತಿ ನೀಡಿದೆ.ಆಕ್ಸ್ ಫರ್ಡ್ ಯುನಿವರ್ಸಿಟಿ ಮತ್ತು ಆಸ್ಟ್ರಾಝೆನಿಕಾ ಕಂಪನಿಗಳು ತಯಾರಿಸಿದ್ದ ಲಸಿಕೆಯನ್ನು ಸೇರಂ ಇನ್ಸ್ಟಿಟ್ಯೂಟ್ ಭಾರತದಲ್ಲಿ ವೈದ್ಯಕೀಯ ಪ್ರಯೋಗಕ್ಕೆ ಒಳಪಡಿಸುತ್ತಿದೆ.
ಬ್ರಿಟನ್ ನಲ್ಲಿ ಲಸಿಕೆ ಪ್ರಯೋಗಿಸಲಾಗಿದ್ದ ಲಸಿಕೆಯಿಂದ ಒಬ್ಬರಲ್ಲಿ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬ್ರಿಟನ್ ನಲ್ಲಿ ಆಸ್ಟ್ರಾಝೆನಿಕಾ ಕಂಪನಿ ವೈದ್ಯಕೀಯ ಪರೀಕ್ಷೆಯನ್ನು ಸ್ಥಗಿತಗೊಳಿಸಿದ್ದು ಬಳಿಕ ಭಾರತದಲ್ಲಿಯೂ ಡಿಜಿಸಿಐ ವೈದ್ಯಕೀಯ ಪ್ರಯೋಗ ಸ್ಥಗಿತಗೊಳಿಸಲು ಸೇರಂ ಇನ್ಸ್ಟಿಟ್ಯೂಟ್ ಗೆ ಸೂಚನೆ ನೀಡಿತ್ತು.ಮತ್ತೆ ಸೇರಂ ಇನ್ಸಿಟ್ಯೂಟ್ ಮನವಿ ಮಾಡಿದ ಮೇರೆಗೆ ಬಾಕಿ ಉಳಿದ ಎರಡು ಮತ್ತು ಮೂರನೇ ಹಂತದ ಲಸಿಕೆ ಪ್ರಯೋಗ ನಡೆಸಲು ಅನುಮತಿ ನೀಡಲಾಗಿದೆ. ಹೆಚ್ಚಿನ ಕಾಳಜಿ ವಹಿಸುವುದು, ಪ್ರಯೋಗದ ಮಾಹಿತಿ ನೀಡಬೇಕೆಂಬುದು ಸೇರಿದಂತೆ ಅನೇಕ ಷರತ್ತುಗಳೊಂದಿಗೆ ಅನುಮತಿ ನೀಡಲಾಗಿದೆ.