ಏಕಕಾಲಕ್ಕೆ 2 ಕೈಯಲ್ಲಿ ಬರೆದು ದಾಖಲೆ ನಿರ್ಮಿಸಿದ ಆದಿ ಸ್ವರೂಪಾ!

 (ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 15. ಮಂಗಳೂರಿನ ಬಾಲಕಿ ಆದಿ ಸ್ವರೂಪಾ ಒಂದು ನಿಮಿಷಕ್ಕೆೆ 45ರಂತೆ ಇಂಗ್ಲಿಷ್ ಪದಗಳನ್ನು ಯುನಿ ಡೈರೆಕ್ಷನಲ್ ಶೈಲಿಯಲ್ಲಿ ಬರೆಯುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. ಉತ್ತರ ಪ್ರದೇಶದ ಬರೇಲಿಯ ಲಾಟಾ ಪ್ರತಿಷ್ಠಾನದ ಎಕ್ಸ್‌ಕ್ಲೂಸಿವ್ ವರ್ಲ್ಡ್ ರೆಕಾರ್ಡ್ಸ್ (ಇಡಬ್ಲುೃಆರ್)ನಲ್ಲಿ ಇದು ಸೇರ್ಪಡೆಯಾಗಿದೆ.

 

 

ಇಲ್ಲಿನ ಸ್ವರೂಪ ಅಧ್ಯಯನ ಕೇಂದ್ರದ ಗೋಪಾಡ್ಕರ್-ಸುಮಾಡ್ಕರ್ ಪುತ್ರಿ ಸ್ವರೂಪಾ 2 ವರ್ಷಗಳ ಹಿಂದೆ ಎರಡೂ ಕೈಯಿಂದ ಬರೆಯುವುದನ್ನು ಆರಂಭಿಸಿದ್ದು, ಈಗ ಹತ್ತು ರೀತಿಗಳಲ್ಲಿ ಬರೆಯುವುದನ್ನು ರೂಢಿಸಿಕೊಂಡಿದ್ದಾರೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಶೈಲಿಗಳ ಪ್ರಾತ್ಯಕ್ಷಿಕೆ ನೀಡಿ, ಯುನಿಡೈರೆಕ್ಷನಲ್, ಒಪೋಸಿಟ್ ಡೈರೆಕ್ಷನ್, ರೈಟ್ ಹ್ಯಾಂಡ್ ಸ್ಪೀಡ್, ಲೆಫ್ಟ್‌ಹ್ಯಾಂಡ್ ಸ್ಪೀಡ್, ರಿವರ್ಸ್ ರನ್ನಿಂಗ್, ಮಿರರ್ ಇಮೇಜ್, ಹೆಟೆರೋಟೋಪಿಕ್, ಹೆಟೆರೋ ಲಿಂಗ್ವಿಸ್ಟಿಕ್, ಎಕ್ಸ್‌ಚೇಂಜ್, ಡ್ಯಾನ್ಸಿಂಗ್ ಮತ್ತು ಬ್ಲೈಂಡ್ ಫೋಲ್ಡ್, ಬ್ಲೈಂಡ್‌ಫೋಲ್ಡ್ ಶೈಲಿಯಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿದರೂ ಬೋರ್ಡ್ ಮೇಲೆ ಸರಿಯಾಗಿ ಬರೆದು ಅಚ್ಚರಿ ಮೂಡಿಸಿದರು. ಲಾಕ್‌ಡೌನ್‌ ಅವಧಿಯನ್ನು ಸದುಪಯೋಗಪಡಿಸಿಕೊಂಡು, ಇದರಲ್ಲಿ ತಜ್ಞತೆ ಪಡೆದಿದ್ದಾಳೆ ಎಂದು ಕೇಂದ್ರದ ಮುಖ್ಯಸ್ಥರೂ ಆಗಿರುವ ಈಕೆಯ ಪಾಲಕರಾದ ಗೋಪಾಡ್ಕರ್ ಮತ್ತು ಸುಮಾಡ್ಕರ್ ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

Also Read  ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ.!➤ಪ್ರಕರಣ ದಾಖಲು

 

 

error: Content is protected !!
Scroll to Top