ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪೂಜೆ ಸೇವೆಗಳು ಆರಂಭ

(ನ್ಯೂಸ್ ಕಡಬ) newskadaba.com ಕುಕ್ಕೆ ಸುಬ್ರಹ್ಮಣ್ಯ, ಸೆ.14:  ರಾಜ್ಯದಲ್ಲಿ ಕೊರೋನಾ ವೈರಸ್ ನಿಂದ ಹಲವು ದೇವಾಲಯಗಳ ಬಾಗಿಲನ್ನು ಬಂದ್ ಮಾಡಲಾಗಿತ್ತು. ಎಲ್ಲ ಸೇವೆಗಳು ಸ್ಥಗಿತಗೊಂಡಿತ್ತು. ಇದೀಗಾ, ಮತ್ತೆ ಪ್ರಸಿದ್ದ, ಪವಿತ್ರವಾದ ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ಪೂಜಾ ಸೇವೆಗಳು ಇಂದಿನಿಂದ ಆರಂಭಗೊಂಡಿದೆ.

 

ಕಳೆದೊಂದು ತಿಂಗಳಿನಿಂದ ದೇವರ ದರ್ಶನ ಆರಂಭವಾಗಿದ್ದರೂ, ಸೇವೆಗಳು ಆರಂಭವಾಗಿರಲಿಲ್ಲ. ಇಂದಿನಿಂದ ದಿನಕ್ಕೆ 30 ಸರ್ಪಸಂಸ್ಕಾರ ಸೇವೆ. 30 ನಾಗ ಪ್ರತಿಷ್ಠೆ, ಬೆಳಗ್ಗಿನ ಪಾಳಿಯ ಎರಡು ಪಾಳಿಯ ಆಶ್ಲೇಷ ಪೂಜೆ ತಲಾ 30 ರಂತೆ. ಮಹಾಪೂಜೆ ಮತ್ತು ಪಂಚಾಮೃತಾಭಿಷೇಕ ತಲಾ 10 ರಂತೆ ಮಾಡಲು ಅವಕಾಶ ಕಲ್ಪಿಸಸಲಾಗಿದೆ. ಎಲ್ಲಾ ಸೇವೆಗೆ ಇಬ್ಬರಿಗೆ ಮಾತ್ರ ಭಾಗವಹಿಸಲು ಅವಕಾಶವಿದ್ದು, ಸೇವಾರ್ಥಿಗಳಿಗೆ ಮಾತ್ರ ಅನ್ನ ಪ್ರಸಾದ ವ್ಯವಸ್ಥೆ ಇರಲಿದೆ. ಮೂರು ಸಾವಿರಕ್ಕೂ ಮೇಲ್ಪಟ್ಟು ಸರ್ಪ ಸಂಸ್ಕಾರ ಸೇವೆಗೆ ಬುಕ್ಕಿಂಗ್ ಆಗಿದ್ದು, ಸದ್ಯಕ್ಕೆ ಇನ್ನು ಹೊಸದಾಗಿ ಸೇವೆಗೆ ಅವಕಾಶವಿರುವುದಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

Also Read  ದಿ. ಕಾರ್ತಿಕ್ ಮೇರ್ಲ ಅವರ ಸ್ಮರಣಾರ್ಥ ಸಾರ್ವಜನಿಕ ಬಸ್ ತಂಗುದಾಣ ಲೋಕಾರ್ಪಣೆ

 

error: Content is protected !!
Scroll to Top