ಕ್ಯಾಂಪಸ್ ಫ್ರಂಟ್ ಮಡಂತ್ಯಾರು ವಲಯದ ವತಿಯಿಂದ ಡ್ರಗ್ಸ್ ಜಾಲದ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಮನವಿ

(ನ್ಯೂಸ್ ಕಡಬ) newskadaba.com ಮಡಂತ್ಯಾರ್ ಸೆ. 05. ಜಿಲ್ಲೆಯಲ್ಲಿ ಮಾದಕ ದ್ರವ್ಯದ ಜಾಲಕ್ಕೆ ಕಡಿವಾಣ ಹಾಕಲು ಹಾಗೂ ಈ ಜಾಲದ ಮೂಲವನ್ನು ಪತ್ತೆ ಹಚ್ಚಲು ಒತ್ತಾಯಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮಡಂತ್ಯಾರ್ ವಲಯದ ವತಿಯಿಂದ ಪುಂಜಾಲಕಟ್ಟೆ ಪೋಲಿಸ್ ಸಬ್ ಇನ್ಸ್ಪೆಕ್ಟರ್ ಸೌಮ್ಯ. ಜೆ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ಕ್ಯಾಂಪಸ್ ಫ್ರಂಟ್ ಮಡಂತ್ಯಾರ್ ವಲಯಾಧ್ಯಕ್ಷರು ಶಹೀರ್ ಪಾಂಡವರಕಲ್ಲು, ಬೆಳ್ತಂಗಡಿ ಜಿಲ್ಲಾ ಕಾರ್ಯದರ್ಶಿ ಯಾಸೀನ್ ಬಂಗೇರಕಟ್ಟೆ, ಜಿಲ್ಲಾ ಸದಸ್ಯ ಉಸ್ಮಾನ್ ಬಂಗೇರಕಟ್ಟೆ ಮತ್ತು ಮಡಂತ್ಯಾರ್ ವಲಯ ಸದಸ್ಯರಾದ ಸಿದ್ದೀಕ್ ಬಂಗೇರಕಟ್ಟೆ ಮತ್ತು ಸಫ್ವಾನ್ ಬಂಗೇರಕಟ್ಟೆ ಉಪಸ್ಥಿತರಿದ್ದರು.

Also Read  ನೂಜಿಬಾಳ್ತಿಲ ಬೆಥನಿ ವಿದ್ಯಾಸಂಸ್ಥೆಯ ಇರ್ವರು ವಿದ್ಯಾರ್ಥಿಗಳು ಜಿಲ್ಲಾಮಟ್ಟದ ಗುಡ್ಡಗಾಡು ಓಟದಲ್ಲಿ ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆ

error: Content is protected !!
Scroll to Top