ಕಡಬ: ಗೃಹರಕ್ಷಕ ದಳದ ಮಾಜಿ ಘಟಕಾಧಿಕಾರಿ ಗೊಪಾಲ್ ರವರಿಗೆ ಬೀಳ್ಕೂಡುಗೆ ➤ ಗೋಪಾಲ್ ರವರ ಸೇವೆಯನ್ನು ಗೃಹರಕ್ಷಕದಳ ಇಲಾಖೆ ಸ್ಮರಿಸುತ್ತದೆ ಡಾ||ಚೂಂತಾರು

(ನ್ಯೂಸ್ ಕಡಬ) newskadaba.com ಕಡಬ, ಆ. 30. ಗೃಹರಕ್ಷಕದಳ ಘಟಕದ ವತಿಯಿಂದ ದಿನಾಂಕ ಇಂದು  ಇಲ್ಲಿನ ಕಡಬ ಘಟಕಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಸಮಾದೇಷ್ಠರಾದ ಡಾ||ಮುರಲೀ ಮೋಹನ್ ಚೂಂತಾರುರವರು ಭೇಟಿ ನೀಡಿ, ಇದೇ ತಿಂಗಳ 26 ರಂದು ನಿವೃತ್ತಿ ಹೊಂದಿದ ಕಡಬದ ಮಾಜಿ ಘಟಕಾಧಿಕಾರಿ ಗೊಪಾಲ್ ರವರನ್ನು ಘಟಕದ ವತಿಯಿಂದ ಕಡಬ ಮಾದರಿ ಶಾಲಾ ಆವರಣದಲ್ಲಿ ಎಲ್ಲಾ ಗೃಹರಕ್ಷಕರ ಸಮ್ಮುಖದಲ್ಲಿ ಸಮಾದೇಷ್ಠರು ಫಲ, ಪುಷ್ಪ ನೀಡಿ ಸನ್ಮಾನಿಸಿದರು.

ಈ ವೇಳೆ ಮಾತನಾಡಿದ ಸಮಾದೇಷ್ಠರು ಗೊಪಾಲ್ ರವರ ಸೇವೆಯನ್ನು ಇಲಾಖೆ ಸ್ಮರಿಸುತ್ತದೆ ಇನ್ನೂ ಮುಂದೆ ನಿವೃತ್ತ ಜೀವನ ಸುಖವಾಗಿ, ಆರೋಗ್ಯವಂತರಾಗಿರಿ ಎಂದು ಶುಭ ಹಾರೈಸಿದರು

ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾಜಿ ಘಟಕಾಧಿಕಾರಿ ಗೋಪಾಲ್ ರವರು ನನ್ನ ಅವಧಿಯಲ್ಲಿ ಸಹಕಾರ ನೀಡಿದ ಎಲ್ಲಾ ಗೃಹರಕ್ಷಕರು, ಅಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಮಾದೇಷ್ಠರಾದ ಡಾ||ಮುರಲೀ ಮೋಹನ್ ಚೂಂತಾರು, ಉಪ್ಪಿನಂಗಡಿ ಘಟಕದ ಪ್ರಭಾರ ಘಟಕಾಧಿಕಾರಿ ದಿನೇಶ್.ಬಿ, ಕಡಬ ಘಟಕದ ಪ್ರಭಾರ ಘಟಕಾಧಿಕಾರಿ ತೀರ್ಥೇಶ್, ಹಿರಿಯ ಗೃಹರಕ್ಷಕರಾದ ಸುಂದರ್, ಜಯಪ್ರಕಾಶ್ ಉಪಸ್ಥಿತರಿದ್ದರು. ಪ್ರಭಾರ ಘಟಕಾಧಿಕಾರಿ ತೀರ್ಥೇಶ್ ಸ್ವಾಗತಿಸಿ, ಹಿರಿಯ ಗೃಹರಕ್ಷಕ ಸುಂದರ್ ವಂದಿಸಿದರು.

error: Content is protected !!

Join the Group

Join WhatsApp Group