ಕಡಬ: ಶಿವಳ್ಳಿ ಸಂಪದ ಕಡಬ ವಲಯದ ವಾರ್ಷಿಕ ಮಹಾಸಭೆ, ಪ್ರತಿಭಾ ಪುರಸ್ಕಾರ

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಐಎಎಸ್, ಐಪಿಎಸ್ನಂತ ಹುದ್ದೆ ಅಲಂಕರಿಸಬೇಕು: ಸುಬ್ರಹ್ಮಣ್ಯ ಸ್ವಾಮೀಜಿ

(ನ್ಯೂಸ್ ಕಡಬ) newskadaba.com ಕಡಬ, ಜೂ.05. ಶಿವಳ್ಳಿ ಸಂಪದ ಕಡಬ ವಲಯ ಇದರ 2016-17ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜೂ.3ರಂದು ಸಂಜೆ ಕಡಬ ಶ್ರೀಕಂಠಸ್ವಾಮಿ ಶ್ರೀ ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ 625ರಲ್ಲಿ 625 ಅಂಕ ಪಡೆದುಕೊಂಡ ಕಡಬ ಸೈಂಟ್ ಜೋಕಿಮ್ಸ್‌ ಶಾಲಾ ವಿದ್ಯಾರ್ಥಿ ಪುರ್ಣಾನಂದ ಹಾಗೂ ಶಿವಳ್ಳಿ ಸಮಾಜದ ಇತರೇ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವೂ ನಡೆಯಿತು.

ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಎಸ್ಎಸ್ಎಲ್ಸಿಯಲ್ಲಿ ರಾಜ್ಯದ ಟಾಪರ್ ಆಗಿರುವ ಕುಟ್ರುಪ್ಪಾಡಿ ಹಳ್ಳಂಗೇರಿಯ ವಿಷ್ಣುಮೂರ್ತಿ ಉಪಾಧ್ಯಾಯ ಹಾಗೂ ಸವಿತಾ ದಂಪತಿ ಪುತ್ರ ಪುರ್ಣಾನಂದ ಹೆಚ್. ಹಾಗೂ ಶಿವಳ್ಳಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಶಿವಳ್ಳಿ ಸಮಾಜದ ಪರವಾಗಿ ಸನ್ಮಾನಿಸಿದರು. ಬಳಿಕ ಆಶೀರ್ವಚನ ನೀಡಿದ ಅವರು, ಪೇಟೆ, ಪಟ್ಟಣಗಳಲ್ಲಿ ಲಕ್ಷಾಂತರ ರೂ.ವೆಚ್ಚ ಮಾಡಿ ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿದ್ದರೂ ಆ ವಿದ್ಯಾರ್ಥಿಗಳಿಗೆ ಉತ್ತಮ ಸಾಧನೆ ಮಾಡಲು ಕಷ್ಟವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶವಾದ ಕಡಬದಲ್ಲಿ, ಅದರಲ್ಲೂ ಕುಟ್ರುಪ್ಪಾಡಿಯಂತಹ ತೀರಾ ಹಳ್ಳಿ ಪ್ರದೇಶದಲ್ಲಿ ಬೆಳೆದ ಪುರ್ಣಾನಂದ ತನ್ನ ಸಾಮಥರ್ಯ್‌ದಿಂದಲೇ ಎಸ್ಎಸ್ಎಲ್ಸಿಯಲ್ಲಿ 625ರಲ್ಲಿ 625 ಪುರ್ಣ ಅಂಕ ಪಡೆದುಕೊಂಡು ಸಾಧನೆಗೈದಿರುವುದಕ್ಕೆ ಎಲ್ಲರೂ ಸಂತೋಷ ಪಡಲೇಬೇಕಾಗಿದೆ ಎಂದು ನುಡಿದರು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಐಎಎಸ್, ಐಪಿಎಸ್ನಂತಹ ಉನ್ನತ ಹುದ್ದೆ ಅಲಂಕರಿಸಬೇಕು. ಇವರಿಗೆ ಸೂಕ್ತ ತರಬೇತಿ ನೀಡಲು ಸಂಘ ಸಂಸ್ಥೆಗಳು ಮುಂದೆ ಬರಬೇಕೆಂದು ಸ್ವಾಮೀಜಿ ಹೇಳಿದರು.
ಅರ್ಚಕ ಕೇಶವ ಬೈಪಾಡಿತ್ತಾಯ, ಕಡ್ಯ ವಾಸುದೇವ ಭಟ್, ಶಿವಳ್ಳಿ ಸಂಪದ ಕಡಬ ವಲಯದ ಗೌರವಾಧ್ಯಕ್ಷ ಕೆ.ನಾಗರಾಜ ಆಚಾರ್ಯ, ಉಪಾಧ್ಯಕ್ಷ ಎ.ರಾಮಕೃಷ್ಣ ಬೈಪಾಡಿತ್ತಾಯ, ಜೊತೆ ಕಾರ್ಯದರ್ಶಿ ಶ್ರೀಲತಾ ರಾಮ ಭಟ್, ಮಹಿಳಾ ಸಂಪದದ ಅಧ್ಯಕ್ಷೆ ವೀಣಾ ವಿ.ಭಟ್, ಕಾರ್ಯದರ್ಶಿ ಸುಜಾತ ಪಿ.ಭಟ್, ಯುವ ಸಂಪದದ ಅಧ್ಯಕ್ಷ ಅವಿನಾಶ ಎ., ಕಾರ್ಯದರ್ಶಿ ಶಿಶಿರ ಕೆ., ಬಾಲಕೃಷ್ಣ ಭಟ್, ತಾಲೂಕು ಪ್ರತಿನಿಧಿ ಕೆ.ಹರಿಪ್ರಸಾದ ಉಪಾಧ್ಯಾಯ, ಪುರ್ಣಾನಂದರ ತಂದೆ ವಿಷ್ಣುಮೂರ್ತಿ ಉಪಾಧ್ಯಾಯ, ತಾಯಿ ಸವಿತಾ ಉಪಾಧ್ಯಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿವಳ್ಳಿ ಸಂಪದ ಕಡಬ ವಲಯದ ಅಧ್ಯಕ್ಷ ಕೆ.ಪ್ರಸಾದ ಕೆದಿಲಾಯ ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀಮತಿ ಶೋಭಾ ಬೈಪಾಡಿತ್ತಾಯ ವರದಿ ವಾಚಿಸಿದರು. ಪ್ರಕಾಶ್ ಭಟ್ ಲೆಕ್ಕಪತ್ರ ಮಂಡಿಸಿದರು. ವಾಸುದೇವ ಬೈಪಾಡಿತ್ತಾಯ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಕಡಬ ಶ್ರೀಕಂಠಸ್ವಾಮಿ ಶ್ರೀ ಮಹಾಗಣಪತಿ ದೇವಸ್ಥಾನದ ಪರವಾಗಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನಾರಾಯಣ ಗೌಡ ಅಲಂಗೂರು, ಕಾರ್ಯದರ್ಶಿ ಮೋಹನ್ದಾಸ್, ಸದಸ್ಯ ಗಂಗಾಧರ ನಾಯ್ಕ್‌ರವರು ಪುರ್ಣಾನಂದರಿಗೆ ಹಾರಾರ್ಪಣೆ ಮಾಡಿ ಗೌರವಿಸಿದರು.

error: Content is protected !!
Scroll to Top