ವಸತಿ ಶಾಲೆಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಸುವ ದಿನಾಂಕದಲ್ಲಿ ಬದಲಾವಣೆ

(ನ್ಯೂಸ್ ಕಡಬ) newskadaba.com ಕರಾವಳಿ. ಆ,25: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕಮ್ಮಾಜೆ, ಕಲ್ಲಬೆಟ್ಟು ನೆಲ್ಲಿತೀರ್ಥ,ಗುರುಪುರ, ಬೆಳ್ತಂಗಡಿಯ ಮಚ್ಚಿನ, ಮುಂಡಾಜೆ, ಹೊಸಂಗಡಿ, ಬಂಟ್ವಾಳದ ವಗ್ಗ, ಪುತ್ತೂರಿನ ಬಲ್ನಾಡು, ಉಪ್ಪಿನಂಗಡಿ ಹಾಗೂ ಸುಳ್ಯದ ಪಂಜ ಮೊರಾರ್ಜಿ ದೇಸಾಯಿ/ ಡಾ| ಬಿ.ಆರ್.‌ ಅಂಬೆಡ್ಕರ್‌/ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಗಳಿಗೆ 6ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಕೆಯನ್ನು ಪುನಃ ಆರಂಭಿಸಲಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25-08-2020 ಆಗಿತ್ತು. ಆದರೆ ದಿನಾಂಕ ಮುಂದೂಡಿಕೆಯಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 05-09-2020 ಕೊನೆಯ ದಿನಾಂಕವಾಗಿರುತ್ತದೆ.

ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. 6 ರಿಂದ 10 ನೇ ತರಗತಿಯವರೆಗೆ ಆಂಗ್ಲ ಮಾದ್ಯಮದಲ್ಲಿ ವ್ಯಾಸಂಗ ಮಾಡಲು ಪ್ರತಿಭಾನ್ವಿತ ಗ್ರಾಮೀಣ ವಿದ್ಯಾರ್ಥಿಗಳಿಗೆ ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಈ ವಿದ್ಯಾರ್ಥಿಗಳಿಗೆ ಯಾವುದೇ ಶುಲ್ಕವಿಲ್ಲದೇ ಊಟ, ವಸತಿ, ಸಮವಸ್ತ್ರ, ಪಠ್ಯ ಪುಸ್ತಕ ಹಾಗೂ ಇನ್ನೀತರ ಸಾಮಾಗ್ರಿಗಳನ್ನು ನೀಡಲಾಗುವುದು. ಅಭ್ಯರ್ಥಿಯು ತನ್ನ ಎಸ್.ಎ.ಟಿ.ಎಸ್.‌ ಸಂಖ್ಯೆ, ಭಾವಚಿತ್ರ, ಜಾತಿ/ಆದಾಯ ಪ್ರಮಾಣ ಪತ್ರ, ಆಧಾರ್‌ ಹಾಗೂ ಸಂಬಂಧಿತ ಇತರೆ ದಾಖಲೆಗಳೊಂದಿಗೆ ಹತ್ತಿರ ವಸತಿ ಶಾಲೆಯ ಪ್ರಾಂಶುಪಾಲರನ್ನು ಸಂಪರ್ಕಿಸಿ, ವಸತಿ ಶಾಲೆಯಲ್ಲಿಯೇ ಆನ್‌ ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ವಸತಿ ಶಾಲೆಯ ಪ್ರಾಂಶುಪಾಲರನ್ನು ಸಂಪರ್ಕಿಸಬಹುದು.
ದೂರವಾಣಿ ಸಂಖ್ಯೆ : 9161063223

error: Content is protected !!

Join the Group

Join WhatsApp Group