ಸ್ಕೇಟಿಂಗ್ ರಿಂಕ್: ಇ ಟೆಂಡರ್ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 24. ತೋಟಗಾರಿಕೆ ಇಲಾಖೆಯು ಕದ್ರಿ ಉದ್ಯಾನವನದಲ್ಲಿ ಸ್ಕೇಟಿಂಗ್ ರಿಂಕ್ ಅನ್ನು ಒಡಂಬಡಿಕೆ ಮೂಲಕ ಕ್ರೀಡಾ ಸಂಸ್ಥೆ/ಸಂಘ/ಕ್ಲಬ್/ತರಬೇತುದಾರರು ವಹಿಸಲು ಹಾಗೂ ಗರಿಷ್ಠ ಮೊತ್ತದ ಬಳಕೆ ಶುಲ್ಕ ಸರಕಾರಕ್ಕೆ ಪಾವತಿಸಲು ಅವಕಾಶವಾಗುವಂತೆ ಆಸಕ್ತ ಸಂಸ್ಥೆ / ಸಂಘ / ಕ್ಲಬ್ / ತರಬೇತುದಾರರುಗಳಿಂದ ಆಸಕ್ತಿ ವ್ಯಕ್ತಪಡಿಸಲು ಕರ್ನಾಟಕ ಸರಕಾರದ ಇ-ಪ್ರೋಕ್ಯೂರ್‍ಮೆಂಟ್ ಪೋರ್ಟಲ್ ಮೂಲಕ ಆಹ್ವಾನಿಸಲಾಗಿದೆ.

ಇ-ಪ್ರೋಕ್ಯೂರ್‍ಮೆಂಟ್ ಪೋರ್ಟಲ್ ಮೂಲಕ ಸಲ್ಲಿಸಲು ಸೆಪ್ಟೆಂಬರ್ 4 ರಂದು ಸಂಜೆ 4 ಗಂಟೆ ಕೊನೆಯ ದಿನ. ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಇಲಾಖೆ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ, ರಾಜ್ಯ ವಲಯ, ಮಂಗಳೂರು, ದೂರವಾಣಿ ಸಂಖ್ಯೆ 0824 2444298 ಸಂಪರ್ಕಿಸುವಂತೆ  ಪ್ರಕಟಣೆ ತಿಳಿಸಿದೆ.

Also Read  ಕೊರೊನಾ ಜೊತೆಗೆ ಇತರ ಕಾಯಿಲೆಗಳ ನಿಯಂತ್ರಣಕ್ಕೂ ಆದ್ಯತೆ ನೀಡಿ ➤ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಆರೋಗ್ಯ ಇಲಾಖೆ ಸೂಚನೆ

error: Content is protected !!
Scroll to Top