ಕರಾವಳಿಯಲ್ಲಿ 10 ಸಾವಿರದ ಗಡಿ ದಾಟಿದ ಕಿಲ್ಲರ್ ಕೊರೋನಾ

(ನ್ಯೂಸ್ ಕಡಬ) newskadaba.com ಮಂಗಳೂರು. ಆ,24:  ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಭಾನುವಾರ ಕರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ತಲಾ 10 ಸಾವಿರದ ಗಡಿ ದಾಟಿದೆ. ದ.ಕ.ದಲ್ಲಿ ಮೊದಲ ಕರೊನಾ ಪತ್ತೆಯಾಗಿ ಐದು ತಿಂಗಳಲ್ಲಿ ಸೋಂಕಿತರ ಸಂಖ್ಯೆ ಈ ಮಟ್ಟಕ್ಕೆ ಏರಿದೆ. ಶನಿವಾರ 228 ಮತ್ತು ಭಾನುವಾರ 193 ಪ್ರಕರಣಗಳು ವರದಿಯಾಗುವ ಮೂಲಕ ಒಟ್ಟು ಪ್ರಕರಣಗಳು 10,330ಕ್ಕೆ ಏರಿಕೆಯಾಗಿವೆ.

 

 

ಎರಡು ದಿನದಲ್ಲಿ ಒಟ್ಟು 9 ಮಂದಿ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಪ್ರಸ್ತುತ 2,343 ಸಕ್ರಿಯ ಪ್ರಕರಣಗಳಿದ್ದು, 7,677 ಮಂದಿ ಬಿಡುಗಡೆಯಾಗಿದ್ದಾರೆ. ಒಟ್ಟು ಮೃತರ ಸಂಖ್ಯೆ 310. ಭಾನುವಾರ 164 ಮಂದಿ ಕರೊನಾದಿಂದ ಗುಣವಾಗಿದ್ದಾರೆ ಎಂದು ಜಿಲ್ಲಾಡಳಿತದ ಹೆಲ್ತ್ ಬುಲೆಟಿನ್ ತಿಳಿಸಿದೆ. ಉಡುಪಿ ಜಿಲ್ಲೆಯಲ್ಲಿಯೂ ಕರೊನಾ ಸೋಂಕಿತರ ಸಂಖ್ಯೆ 10 ಸಾವಿರ ಗಡಿ ದಾಟಿದೆ. ಶನಿವಾರ 348, ಭಾನುವಾರ 117 ಮಂದಿಯಲ್ಲಿ ಸೋಂಕು ದೃಡಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 10,133ಕ್ಕೆ ಏರಿದೆ.ಇಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 84ಕ್ಕೆ ಏರಿಕೆಯಾಗಿದೆ.

Also Read  ಬಿಜೆಪಿಯ ಭರ್ಜರಿ ಬ್ಯಾಟಿಂಗ್‌ಗೆ ಸೋಲೊಪ್ಪಿಕೊಂಡ ಕಾಂಗ್ರೆಸ್ ➤ 15 ಕ್ಷೇತ್ರಗಳ ಪೈಕಿ 12 ರಲ್ಲಿ ಅರಳಿದ ಕಮಲ

 

error: Content is protected !!
Scroll to Top