ಸರಕಾರಿ ಶಾಲೆ ಮಕ್ಕಳಿಗೆ ಆನ್‍ಲೈನ್ ಶಿಕ್ಷಣ ತರಬೇತಿ ➤ ಎಂ.ಬಿ.ಫೌಂಡೇಶನ್ ಸಹಕಾರ

(ನ್ಯೂಸ್‌ಕಡಬ) newskadaba.com ಸುಳ್ಯ, ಆ 18:ಸರಕಾರದ ನೂತನ ನಿಯಮದಂತೆ ಸರಕಾರಿ ಶಾಲಾ ಮಕ್ಕಳಿಗೆ ಆನ್ಲೈನ್ ಶಿಕ್ಷಣ ಒದಗಿಸಲು ಹೆತ್ತವರಿಗೆ ಸಾಧ್ಯವಾಗದೆ ಇರುವುದರಿಂದ ಸಮುದಾಯ ಕೇಂದ್ರಗಳನ್ನು ಪ್ರಾರಂಭಿಸಿ ಶಿಕ್ಷಣ ಒದಗಿಸುವ ಮೂಲಕ ಅವರನ್ನು ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತೆ ಮಾಡುವ ನೂತನ ಕಾರ್ಯಕ್ರಮವು ಸುಳ್ಯ ನಗರ ವ್ಯಾಪ್ತಿಯಲ್ಲಿ ಪ್ರಾರಂಭಗೊಂಡಿದೆ.

ಕ್ಷೇತ್ರ ಶಿಕ್ಷಣ ಸಂಪನ್ಮೂಲ ಕೇಂದ್ರದಲ್ಲಿ ಈ ಕುರಿತು ಕಾರ್ಯಗಾರ ಹಾಗೂ ಮಾಹಿತಿ ಕಾರ್ಯಕ್ರಮವು ನಡೆಯಿತು. ಪ್ರತೀ ಕೇಂದ್ರಕ್ಕೆ ಮಾಸ್ಕ್, ಸ್ಯಾನಿಟೈಜರ್, ಪುಸ್ತಕ ಮತ್ತು ಶಿಕ್ಷಕರ ತರಬೇತಿ ಪಡೆದ ಸ್ವಯಂ ಸೇವಕರ ನಿಯೋಜನೆ ಎಂ.ಬಿ.ಫೌಂಡೇಶನ್ ವತಿಯಿಂದ ನೀಡಲಿದ್ದಾರೆ. ಪ್ರತೀ ಶಿಕ್ಷಕರು ಮತ್ತು ಮಕ್ಕಳ ಥರ್ಮಾಲ್ ಸ್ಕಾನ್ ಮೀಟರ್ ಮತ್ತು ಪಲ್ಸ್ ಆಕ್ಸಿಜನ್ ಮೀಟರ್ ಮೂಲಕ ತಪಾಸನೆ ಮಾಡಲು ವೈದ್ಯಕೀಯ ಉಪಕರಣಗಳನ್ನು ಕೂಡ ಎಂ.ಬಿ.ಫೌಂಡೇಶನ್ ಒದಗಿಸಿದೆ. ನಗರ ವ್ಯಾಪ್ತಿಯ ಶಾಲಾ ಮುಖೋಪಾಧ್ಯಾಯ ಆಸಕ್ತಿ ಶಿಕ್ಷಣ ಇಲಾಖೆಯ ಎರಡೂ ಸಂಸ್ಥೆಗಳ ಪ್ರಯತ್ನಕ್ಕೆ ನಾವು ಸಹಕಾರ ನೀಡುವ ಮೂಲಕ ಸರಕಾರದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದೇವೆ ಎಂದು ಎಂ.ಬಿ.ಫೌಂಡೇಶನ್ ಅಧ್ಯಕ್ಷ ಎಂ.ಬಿ. ಸದಾಶಿವ ಕಾರ್ಯಗಾರದಲ್ಲಿ ತಿಳಿಸಿದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ. ಮಹದೇವ್, ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಶ್ರೀಮತಿ ವೀಣಾ ಎಂ.ಟಿ, ಮಹಿಳಾ ಸಮಾಜದ ಮಾಜಿ ಅಧ್ಯಕ್ಷೆ ಶ್ರೀಮತಿ ಹರಿಣಿ ಸದಾಶಿವ, ಅಧ್ಯಕ್ಷೆ ಜಯಲಕ್ಷ್ಮಿ ಮಧುಕುಮಾರ್, ಶಿಕ್ಷಕ ವೃಂದದವರು ಮತ್ತು ತರಬೇತುದಾರರು ಉಪಸ್ಥಿತರಿದ್ದರು. ಕೊನೆಯದಾಗಿ ಕಾರ್ಯಕ್ರಮವನ್ನು ಶಿಕ್ಷಕ ಸುಬ್ರಹ್ಮಣ್ಯ ರವರು ನಿರೂಪಿಸಿದರು.

 

 

error: Content is protected !!

Join the Group

Join WhatsApp Group