ಹಂದಿ ಸಾಕಾಣಿಕೆ ರೈತ ಉತ್ಪಾದಕರ ಸಂಘ – ಸದಸ್ಯತ್ವಕ್ಕೆ ಅರ್ಜಿ ಆಹ್ವಾನ

newskadaba.com ಮಂಗಳೂರು, ಆ. 18.  ಕರ್ನಾಟಕ ರಾಜ್ಯ ರೈತ ಉತ್ಪಾದಕರ ಸಂಸ್ಥೆಗಳ ನೀತಿ-2018 ರಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಂದಿ ಸಾಕಾಣಿಕೆ ರೈತ ಉತ್ಪಾದಕರ ಸಂಘ ರಚಿಸಲಾಗುತ್ತಿದೆ. ಸದರಿ ಸಂಘದ ಮುಖಾಂತರ ಹಂದಿ ಸಾಕಾಣಿಕೆ ಮಾಡುತ್ತಿರುವ ರೈತರು ಹಂದಿ ಸಾಕಾಣಿಕೆಯ ವಿವಿಧ ಹಂತದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.

ಸದರಿ ಸಂಸ್ಥೆಯ ನೊಂದಣಿಗೆ, ಸಂಘಟನೆಗೆ ಸಂಸ್ಥೆಯ ಕಚೇರಿ ಆರ್ವತಕ ವೆಚ್ಚಗಳಿಗೆ, ರೈತರ ಅಧ್ಯಯನ ಪ್ರವಾಸಕ್ಕೆ, ರೈತರ ತರಬೇತಿಗೆ ಹೀಗೆ ಸಂಸ್ಥೆಯ ರಚನೆಗೆ ಮತ್ತು ಉತ್ತೇಜನಕ್ಕೆ ಸರ್ಕಾರದಿಂದ ಆರ್ಥಿಕ ನೆರವು /  ಸಹಾಯಧನ ನೀಡಲಾಗುತ್ತದೆ. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಹಂದಿ ಸಾಕಾಣಿಕೆದಾರರು ಸಂಘದ ಸದಸ್ಯರಾಗಬಹುದು. ಸದಸ್ಯತ್ವಕ್ಕೆ ಬೇಕಾದ ದಾಖಲಾತಿಗಳು ಇಂತಿವೆ: ರೈತರ ಆಧಾರ್, ಪಾನ್ ಕಾರ್ಡ್, 4 ಭಾವ ಚಿತ್ರಗಳು, ಆರ್.ಟಿ.ಸಿ, ಬ್ಯಾಂಕ್ ಖಾತೆ ವಿವರ ಮತ್ತು ಸ್ಥಳೀಯ ಪಶು ವೈದ್ಯರ ದೃಢೀಕರಣ.
ಹೆಚ್ಚಿನ ವಿವರಗಳಿಗೆ ಉಪನಿರ್ದೇಶಕರು (ಆಡಳಿತ) ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ದ.ಕ. ಮಂಗಳೂರು, ದೂರವಾಣಿ ಸಂಖ್ಯೆ: 0824 2492337 ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Also Read  ವಿಧಾನ ಸೌಧದಲ್ಲಿ‌ ನಡೆಯುತ್ತಿದೆ ಹೈ ಡ್ರಾಮಾ ► ಯಡಿಯೂರಪ್ಪರಿಗೆ 'ಕೈ' ಕೊಟ್ಟರೇ ಪ್ರತಿಪಕ್ಷದ ಶಾಸಕರು..?

error: Content is protected !!
Scroll to Top