ʻವಚನ ದಿನ’ದ ಪ್ರಯುಕ್ತ ಸ್ಪರ್ಧೆಗಳು

(ನ್ಯೂಸ್‌ ಕಡಬ) newskadaba.com ಮಂಗಳೂರು,ಆ 19. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಇದರ ದ.ಕ.ಜಿಲ್ಲಾ ಘಟಕದಿಂದ ದಿನಾಂಕ:29.08.2020 ರಂದು ನಡೆಯಲಿರುವ ವಚನ ದಿನದ ಪ್ರಯುಕ್ತ ದ.ಕ. ಜಿಲ್ಲೆಯ ಎಲ್ಲಾ ತಾಲೂಕುಗಳ ಮಟ್ಟದಲ್ಲಿ ಪ್ರಬಂಧ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.

ಸ್ಪರ್ಧೆಯು ಎರಡು ವಿಭಾಗಗಳಲ್ಲಿ ನಡೆಯಲಿದೆ. 8, 9 ಮತ್ತು 10ನೆಯ ತರಗತಿಗಳನ್ನೊಳಗೊಂಡ ಪ್ರೌಢ ಶಾಲಾ ವಿಭಾಗಕ್ಕೆ ವಿಷಯ: ‘ನನ್ನ ನೆಚ್ಚಿನ ಶರಣ/ಶರಣೆ’ ಯಾರಾದರೊಬ್ಬರ ಕುರಿತು ಮೂರು ಪುಟಗಳಿಗೆ ಮೀರದಂತೆ. ಎಸ್.ಎಸ್.ಎಲ್.ಸಿ. ಮೇಲ್ಪಟ್ಟು ಪದವಿ, ಸ್ನಾತ್ತಕೋತ್ತರ ಹಾಗೂ ಸಾರ್ವಜನಿಕರಿಗೆ ಎರಡನೇ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದ್ದು, ‘ವಚನಗಳಲ್ಲಿ ಜೀವನ ಮೌಲ್ಯಗಳು ಮತ್ತು ಅನುಷ್ಠಾನ’ ಎಂಬ ವಿಷಯದ ಕುರಿತಂತೆ 4 ಪುಟಗಳಿಗೆ ಮೀರದಂತೆ ಬರೆದು ಕಳುಹಿಸಬೇಕು. ವಿಜೇತರಿಗೆ ತಾಲೂಕು ಮಟ್ಟದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳಲ್ಲದೆ ಅದೇ ಪ್ರಬಂಧಗಳನ್ನು ಆಧರಿಸಿ ಜಿಲ್ಲಾ ಮಟ್ಟದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ನೀಡಲಾಗುವುದು. ನಗದು ಬಹುಮಾನಗಳನ್ನು ಹಾಗೂ ಪ್ರಶಂಸಾ ಪತ್ರಗಳನ್ನು ದಿನಾಂಕ: 29.08.2020 ರಂದು ಮಂಗಳೂರು ಶಕ್ತಿನಗರದ ಶಕ್ತಿ ವಸತಿ ಶಾಲೆಯಲ್ಲಿ ನಡೆಯುವ ಸಮಾರಂಭದಲ್ಲಿ ವಿತರಿಸಲಾಗುವುದು. ಆಸಕ್ತರು ತಮ್ಮ ಪ್ರಬಂಧಗಳನ್ನು 26.08.2020ರ ಮೊದಲು ತಲುಪುವಂತೆ ಈ ವಿಳಾಸಕ್ಕೆ ಕಳುಹಿಸಿಕೊಡಬೇಕಾಗಿ ವಿನಂತಿ. ಪ್ರಾಚಾರ್ಯರು, ಶಕ್ತಿ ವಸತಿ ಶಾಲೆ, ಶಕ್ತಿ ನಗರ, ಮಂಗಳೂರು-575016 / ಅಥವಾ ಇಮೇಲ್: schooloffice@shakthi.edu.in / ಅಥವಾ
Whatsapp : 9945284015.

Also Read  ಗೃಹಲಕ್ಷ್ಮೀ ಯೋಜನೆ ಬಗ್ಗೆ ರೀಲ್ಸ್ ಮಾಡಿ ಬಹುಮಾನ ಗೆಲ್ಲಿ  ರಾಜ್ಯದ ಮಹಿಳೆಯರಿಗೆ ಹೊಸ ಆಫರ್ ನೀಡಿದ ಲಕ್ಷ್ಮೀ ಹೆಬ್ಬಾಳ್ಕರ್

error: Content is protected !!
Scroll to Top