ಮಂಗಳೂರು : ಸಫರ್ ಕ್ಲಬ್ ಮತ್ತು ಬ್ಲಡ್ ಹೆಲ್ಪ್ ಕೇರ್ ವತಿಯಿಂದ ರಕ್ತದಾನ ಶಿಬಿರ

(ನ್ಯೂಸ್ ಕಡಬ) newskadaba.com ಮಂಗಳೂರು. ಆ,17: ಮಂಚಿಲ ಸಫರ್ ಸ್ಪೋಟ್ಸ್ ಮತ್ತು ಕಲ್ಚರಲ್ ಅಸೋಸಿಯೇಶನ್ ಹಾಗೂ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಜಂಟಿ ಆಶ್ರಯದಲ್ಲಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರು ಸಹಯೋಗದಲ್ಲಿ 74ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ  ಬೃಹತ್ ರಕ್ತದಾನ ಶಿಬಿರ ಸಫರ್ ಸ್ಪೋಟ್ಸ್ ಮತ್ತು ಕಲ್ಚರಲ್ ಅಸೋಸಿಯೇಶನ್ ನಲ್ಲಿ ನಡೆಯಿತು ಸಫರ್ ಸ್ಪೋಟ್ಸ್ ಮತ್ತು ಕಲ್ಚರಲ್ ಅಸೋಸಿಯೇಶನ್ ಗೌರವಾಧ್ಯಕ್ಷ ಯು.ಎಚ್ ಫಾರೂಕ್ ಮಾತನಾಡಿ ಪ್ರತೀ ವರ್ಷವು ನಾವು ಸ್ವಾತಂತ್ರ್ಯೋತ್ಸವದ ದಿನದಂದು ಈ ಕಾರ್ಯಕ್ರಮವನ್ನು ಆಯೋಜಿಸುತ್ತೇವೆ, ಈ ಬಾರಿ ಕೋವಿಡ್ ಕಾರಣದಿಂದಾಗಿ ಸ್ವಾತಂತ್ರ್ಯೋತ್ಸವದ ಮರುದಿನ ಆಯೋಜಿಸಿ ಯಶಸ್ವಿ ಕಂಡಿದ್ದೇವೆ, ಇದಕ್ಕೆ ಸಹಕರಿಸಿದ ಎಲ್ಲರಿಗೂ ಸಂಸ್ಥೆಯ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.

ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಅಧ್ಯಕ್ಷ ನಝೀರ್ ಹುಸೈನ್ ಮಂಚಿಲ ಮಾತನಾಡಿ ಶಿಬಿರದಲ್ಲಿ ಸಹಕರಿಸಿದ ನಮ್ಮ ಸಂಸ್ಥೆಯ ಪದಾಧಿಕಾರಿಗಳಿಗೆ ಮತ್ತು ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿಗಳಿಗೆ ಧನ್ಯವಾದಗಳು, ಮುಂದಿನ ದಿನಗಳಲ್ಲಿ ಪ್ರತೀ ವರ್ಷವೂ ಸ್ವಾತಂತ್ರ್ಯೋತ್ಸವದ ದಿನದಂದು ರಕ್ತದಾನ ಶಿಬಿರವನ್ನು  ಆಯೋಜಿಸುತ್ತೇವೆ, ತಮ್ಮೆಲ್ಲರ ಸಹಕಾರ ಇರಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಂಚಿಲ ಸಫರ್ ಸ್ಪೋಟ್ಸ್ ಮತ್ತು ಕಲ್ಚರಲ್ ಅಸೋಸಿಯೇಶನ್ ಹಾಗೂ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) , ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರು ಇದರ ಪದಾಧಿಕಾರಿಗಳನ್ನು ಗೌರವಿಸಲಾಯಿತು. ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರು ಇದರ ರಕ್ತನಿಧಿಯ ಸಿಬ್ಬಂದಿಗಳಾದ ಅಂಥೋನಿ, ಅಶೋಕ್, ಮಂಚಿಲ ಜುಮಾ ಮಸೀದಿಯ ಅಧ್ಯಕ್ಷರಾದ ಮಕ್ಸೂದ್, ಬ್ಲಡ್ ಹೆಲ್ಪ್ ಕೇರ್ ಕರ್ನಾಟಕದ ಗೌರವಾಧ್ಯಕ್ಷ ಇಫ್ತಿಕಾರ್ ಅಹ್ಮದ್, ಸಂಚಾಲಕ ಶಂಶುದ್ದೀನ್ ಬಳ್ಕುಂಜೆ, ವ್ಯವಸ್ಥಾಪಕರಾದ ನವಾಝ್ ಉಳ್ಳಾಲ, ಪ್ರಧಾನ ಕಾರ್ಯದರ್ಶಿ ಸಫ್ವಾನ್ ಕಲಾಯಿ, ಜೊತೆ ಕಾರ್ಯದರ್ಶಿ ಬಷೀರ್ ಮಂಗಳೂರು, ತಸ್ಲೀಂ ಹರೇಕಳ, ಮಾಧ್ಯಮ ಕಾರ್ಯದರ್ಶಿ ಜಲೀಲ್ ಮಾಸ್ತಿಕಟ್ಟೆ, ಶಿಬಿರದ ಆಯೋಜಕರಾದ ಇಮ್ತಿಯಾಝ್ ಬಜ್ಪೆ, ಶಿಬಿರದ ಸಂಯೋಜಕರಾದ ಖಾದರ್ ಮುಂಚೂರು, ರಾಫಿಝ್ ಕೃಷ್ಣಾಪುರ, ನಿರ್ದೇಶಕರಾದ ಅಲ್ಮಾಝ್ ಉಳ್ಳಾಲ ಉಪಸ್ಥಿತರಿದ್ದರು. ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಇದರ ಕೋಶಾಧಿಕಾರಿ ಸತ್ತಾರ್ ಪುತ್ತೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Also Read  ಮೋಟಾರ್ ವಾಹನ ತಿದ್ದುಪಡಿ ಮಸೂದೆ-2017ನ್ನು ಹಿಂಪಡೆಯುವಂತೆ ಅಗ್ರಹ ► ಜ. 8 ಮತ್ತು 9 ರಂದು ರಾಷ್ಟ್ರವ್ಯಾಪಿ ಬಂದ್ ಗೆ ಕರೆ 

 

 

error: Content is protected !!
Scroll to Top