ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ)- ವಿವಿಧ ಕೋರ್ಸ್‍ಗಳಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 14, ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ (ಜಿಟಿಟಿಸಿ) 100% ಉದ್ಯೋಗಾವಕಾಶವುಳ್ಳ ಡಿಪ್ಲೋಮಾ ಕೋರ್ಸುಗಳಾದ ಡಿಪ್ಲೋಮಾ ಇನ್ ಟೂಲ್ ಮತ್ತು ಡೈ ಮೇಕಿಂಗ್ ಹಾಗೂ ಡಿಪ್ಲೋಮ ಇನ್ ಪ್ರಿಸಿಷನ್ ಮ್ಯಾನುಪ್ಯಾಕ್ಚರಿಂಗ್ ಕೋರ್ಸಿಗೆ ಎಸ್ ಎಸ್ ಎಲ್ ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.


ಮಂಗಳೂರಿನ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಜಿಟಿಟಿಸಿ ಸಂಸ್ಥೆಯ ವಿಶಾಲ ಕ್ಯಾಂಪಸ್ ಇದ್ದು, ಎಸ್.ಎಸ್.ಎಲ್.ಸಿ. ಪಾಸಾದ ಅಭ್ಯರ್ಥಿಗಳು ಜಿಟಿಟಿಸಿ ಕೋರ್ಸುಗಳಿಗೆ ಅರ್ಜಿ ಸಲ್ಲಿಸಬಹುದು. ಜಿಟಿಟಿಸಿ ಕೋರ್ಸ್‍ಗಳು ಕರ್ನಾಟಕ ಸರಕಾರ ಹಾಗೂ ಎಐಸಿಟಿಇ (AICTE) ಯಿಂದ ಅಂಗೀಕೃತವಾಗಿದೆ. ಪ್ರಾಸ್ಪೆಕ್ಟಸ್ ಹಾಗೂ ಅರ್ಜಿಗಳನ್ನು ಆನ್‍ಲೈನ್ (gttc.co.in) ನಲ್ಲಿ ರೂ 250, (ಎಸ್.ಸಿ. ಎಸ್.ಟಿ ಮತ್ತು ವರ್ಗ 1 ಅಭ್ಯರ್ಥಿಗಳಿಗೆ ರೂ 125 ಮಾತ್ರ) ಸಲ್ಲಿಸಿ ಪಡೆಯಬಹುದು. ಭರ್ತಿ ಮಾಡಿದ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 5 ಕೊನೆಯ ದಿನ.
ಐಟಿಐ ಟರ್ನರ್ (Turner)/ ಮಿಲ್ಲರ್ (Miller)/ ಮೆಷಿನಿಸ್ಟ್ (Mechinist / ಫಿಟ್ಟರ್(Fitter)/ ಟೂಲ್ & ಡೈ ಮೇಕರ್(Tool & Die Maker) / (ಮ್ಯೆಕಾನಿಕಲ್) (Draughtsman (Mechancial) ಟ್ರೆಡ್‍ನಲ್ಲಿ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳು 2 ನೇ ವರ್ಷದ ತರಬೇತಿಗಳಿಗಾಗಿ ಲ್ಯಾಟರಲ್ ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ ಮತ್ತು ವೃತ್ತಿಪರ ಕೌಶಲ್ಯಾಭಿವೃಧ್ಧಿ ಸರ್ಟಿಫಿಕೆಟ್ ಕೋರ್ಸ್‍ಗಳಾದ ಟೂಲ್ ರೂಮ್ ಮೆಷಿನಿಸ್ಟ್, ಟರ್ನರ್/ ಮಿಲ್ಲರ್/ಫಿಟ್ಟರ್, ಸಿಎನ್.ಸಿ ಪ್ರೋಗ್ರಾಮಿಂಗ್ ಹಾಗೂ ಆಪರೇಷನ್, ಸಿ.ಎ.ಡಿ (CAD)/ಸಿ.ಎ.ಎಮ್ (CAM)/ಸಿಎನ್.ಸಿ (CNC) ಸರ್ಟಿಫಿಕೇಟ್ ಕೋರ್ಸುಗಳಿಗೆ ಉಚಿತ ತರಬೇತಿಯನ್ನು ನೀಡಲಾಗುತ್ತದೆ. ಈ ಎಲ್ಲಾ ಕೋರ್ಸುಗಳಿಗೆ ಅರ್ಜಿಯನ್ನು ಪಡೆಯಲು ಹಾಗೂ ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಮತ್ತು ಹೆಚ್ಚಿನ ವಿವರಗಳಿಗಾಗಿ ಜಿಟಿಟಿಸಿ, ನಂ 7ಇ, ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾ, ಮಂಗಳೂರು ದೂರವಾಣಿ ಸಂಖ್ಯೆ: 0824 2408003, 9481265587, 9741667257, 9535423533 ಸಂಪರ್ಕಿಸುವಂತೆ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಪ್ರಾಶುಂಪಾಲರ ಪ್ರಕಟಣೆ ತಿಳಿಸಿದೆ.

error: Content is protected !!

Join the Group

Join WhatsApp Group