ನೆಲ್ಯಾಡಿ: ಬೊಲೇರೋ – ಪಿಕಪ್ ನಡುವೆ ಮುಖಾಮುಖಿ ಢಿಕ್ಕಿ ➤ ಓರ್ವ ಗಂಭೀರ, ಬೊಲೇರೋ ಇಂಜಿನ್ ಬೆಂಕಿಗಾಹುತಿ



(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಆ.09. ಬೊಲೆರೋ ಹಾಗೂ ಪಿಕಪ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಬೊಲೆರೋ ವಾಹನವು ಬೆಂಕಿಗೆ ಆಹುತಿಯಾದ ಘಟನೆ ಭಾನುವಾರ ಸಂಜೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉದನೆ ಸಮೀಪದ ಲಾವತ್ತಡ್ಕ ಎಂಬಲ್ಲಿ ನಡೆದಿದೆ.





ಆಸ್ಪತ್ರೆಗೆ ಆಕ್ಸಿಜನ್ ಸಾಗಾಟ ಮಾಡುತ್ತಿದ್ದ ಪಿಕಪ್ ಹಾಗೂ ಶಿಬಾಜೆ ನಿವಾಸಿ ರಮೇಶ್ ಎಂಬವರಿಗೆ ಸೇರಿದ ಬೊಲೇರೋ ನಡುವೆ ಲಾವತ್ತಡ್ಕದಲ್ಲಿ ಮುಖಾಮುಖಿ ಢಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿರುವ ರಮೇಶ್ ಅವರನ್ನು ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.






 

error: Content is protected !!
Scroll to Top