(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಆ.08. ಘಟ್ಟ ಪ್ರದೇಶದಲ್ಲಿ ಧಾರಾಕಾರವಾಗಿ ಮಳೆ ಸುತಿಯುತ್ತಿರುವುದರಿಂದ ಕುಮಾರಧಾರ ನದಿಯು ತುಂಬಿ ತುಳುಕುತ್ತಿದ್ದು, ಕುಮಾರಧಾರ ಹಳೆಯ ಮುಳುಗು ಸೇತುವೆಯ ಕೆಳಭಾಗದಲ್ಲಿ ನೀರಿನ ಹರಿಯುವಿಕೆಗೆ ಅಡ್ಡವಾಗಿದ್ದ ಮರ, ಬಿದಿರುಗಳನ್ನು ಶನಿವಾರದಂದು ತೆರವುಗೊಳಿಸಲಾಯಿತು.
ಕಡಬ ತಾಲೂಕು ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ ನೇತೃತ್ವದಲ್ಲಿ ಜೆಸಿಬಿ ಯಂತ್ರದ ಮೂಲಕ ಕಸ ಕಡ್ಡಿಗಳನ್ನು ತೆರವುಗೊಳಿಸಲಾಯಿತು. ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕುಕ್ಕೇ ಸುಬ್ರಹ್ಮಣ್ಯದ ಮುಳುಗು ಸೇತುವೆಗೆ ಎರಡು ವರ್ಷಗಳ ಹಿಂದೆ ಮುಕ್ತಿ ದೊರೆತಿತ್ತು. ಇದೀಗ ಹಳೆಯ ಸೇತುವೆಯ ಕೆಳಭಾಗದಲ್ಲಿ ನೀರಿನ ಹರಿಯುವಿಕೆಗೆ ಅಡ್ಡಿಯಾಗುತ್ತಿದ್ದ ಮರ, ಬಿದಿರು ತುಂಡುಗಳನ್ನು ತೆರವುಗೊಳಿಸಲಾಗಿದೆ.