ಕಡಬದಲ್ಲಿ 132 ಮಂದಿಗೆ ಉಚಿತ ಕೊರೋನಾ ಟೆಸ್ಟ್ ➤ ಎಂಟು ಮಂದಿಗೆ ಕೊರೋನಾ ಪಾಸಿಟಿವ್

(ನ್ಯೂಸ್ ಕಡಬ) newskadaba.com ಕಡಬ, ಆ.01. ಆರೋಗ್ಯ ಇಲಾಖೆಯ ವತಿಯಿಂದ ಉಚಿತ ಕೊರೊನಾ ಪರೀಕ್ಷೆಯು ಕಡಬದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರದಂದು ನಡೆಯಿತು.

ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆದ ಉಚಿತ ಕೊರೊನಾ ಪರೀಕ್ಷೆಯಲ್ಲಿ ಒಟ್ಟು 132 ಮಂದಿ ಸ್ವಯಂ ಪರೀಕ್ಷೆ ನಡೆಸಿದರು. ಇದರಲ್ಲಿ ಬೆಳ್ತಂಗಡಿ ತಾಲೂಕಿನ ಕೊಕ್ಕಡದ 6 ಮಂದಿಗೆ,
ಕಡಬ ತಾಲೂಕಿನ ನೆಲ್ಯಾಡಿ ಸಮೀಪದ ಕೌಕ್ರಾಡಿಯ ಒಬ್ಬರಿಗೆ ಹಾಗೂ ಕೋಡಿಂಬಾಳದ ಒಬ್ಬರು ಸೇರಿದಂತೆ ಒಟ್ಟು 08 ಮಂದಿಗೆ ಕೊರೋನಾ ಪಾಸಿಟಿವ್ ಬಂದಿದೆ ಎಂದು ಕಡಬ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುಚಿತ್ರಾ ರಾವ್ ತಿಳಿಸಿದ್ದಾರೆ.

Also Read  ಪುಷ್ಪರಥದ ಬದಲು ಚಿನ್ನದ ರಥದಲ್ಲಿ ಮೂಕಾಂಬಿಕೆಯ ಉತ್ಸವ ➤ ಅರ್ಚಕರಲ್ಲಿ ಹಾಗೂ ಭಕ್ತರಲ್ಲಿ ಅಸಮಾಧಾನ

error: Content is protected !!
Scroll to Top