ಮಂಗಳೂರು: ಕಾರ್ಗಿಲ್ ವಿಜಯೋತ್ಸವ

(ನ್ಯೂಸ್ ಕಡಬ) newskadaba.com ಮಂಗಳೂರು: ಜು. 26, ದ.ಕ.ಮಾಜಿ ಸೈನಿಕರ ಸಂಘ, ಲಯನ್ಸ್ ಕ್ಲಬ್ ಮಂಗಳೂರು, ಸೆಂಟರ್ ಫಾರ್ ಇಂಟರಗ್ರೇಟೆಡ್ ಲರ್ನಿಂಗ್ ಇದರ ವತಿಯಿಂದ “ಕಾರ್ಗಿಲ್ ವಿಜಯ್ ದಿವಸ್” ಕಾರ್ಯಕ್ರಮವು ರವಿವಾರ ನಗರದ ಕದ್ರಿಯ ಹುತಾತ್ಮರ ಸ್ಮಾರಕದ ಬಳಿ ನಡೆಯಿತು.

ಪುಷ್ಪನಮನ ಸಲ್ಲಿಸಿದ ಅಪರ ಜಿಲ್ಲಾಧಿಕಾರಿ ರೂಪಾ ಎಂ.ಜೆ ಮಾತನಾಡಿ ಕಾರ್ಗಿಲ್ ‌ಯುದ್ಧದಲ್ಲಿ ದೇಶದ ಸೈನಿಕರ ಹೋರಾಟ, ತ್ಯಾಗ, ಬಲಿದಾನವನ್ನು ಯುವ ಪೀಳಿಗೆಯು ತಿಳಿದುಕೊಳ್ಳುವ ಅಗತ್ಯವಿದೆ ಎಂದರು.‌ ಈ ಸಂದರ್ಭ ವಿಧಾನ ಪರಿಷತ್ ಮಾಜಿ ಸದಸ್ಯ ಗಣೇಶ್ ಕಾರ್ಣಿಕ್, ಮಾಜಿ ಸೈನಿಕರ ಸಂಘದ ಅಧ್ಯಕ್ಷ ನಿಟ್ಟೆಗುತ್ತು ಶರತ್ ಭಂಡಾರಿ, ಲಯನ್ಸ್ ಕ್ಲಬ್ ಅಧ್ಯಕ್ಷ ಕೃಷ್ಣಾನಂದ ‌ಪೈ, ನಂದಗೋಪಾಲ್ ಮತ್ತಿತರರು ಪಾಲ್ಗೊಂಡಿದ್ದರು. ಕೊರೋನಾ ಹಿನ್ನೆಲೆಯಲ್ಲಿ ಸುರಕ್ಷಿತ ಅಂತರ ಕಾಪಾಡುವ ನಿಟ್ಟಿನಲ್ಲಿ ಕೆಲವೇ ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Also Read  ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ ➤ಮೋದಿ ಫೋಟೋವಿರೋ ಕಲರ್ ಪುಲ್ ಸೀರೆ

error: Content is protected !!
Scroll to Top