ರಾಜ್ಯದಲ್ಲಿ ಕೊರೋನಾ ಭೀತಿ ನಡುವೆ ಬಾಲ್ಯ ವಿವಾಹದ‌ ಸದ್ಧು ➤ 2 ತಿಂಗಳಲ್ಲಿ 17 ಮದುವೆಗೆ ತಡೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.25:  ಕೊರೋನಾ ಭೀತಿ ನಡುವೆಯೇ ರಾಜ್ಯದಲ್ಲಿ ಬಾಲ್ಯ ವಿವಾಹ ಸದ್ದು ಮಾಡುತ್ತಿದೆ. ಹೌದು ರಾಜ್ಯದ ಕೆಲ ಜಿಲ್ಲೆಗಳಲ್ಲಿ ಸದ್ದಿಲ್ಲದೇ ಬಾಲ್ಯ ವಿವಾಹಗಳು ನಡೆಯುತ್ತಿವೆ. ಕೊರೋನಾ‌ ಭೀತಿ ನಡುವೆ ಅಪ್ರಾಪ್ತ ಹೆಣ್ಣು ಮಕ್ಕಳಿಗೆ ಮದುವೆ ಮಾಡಲು  ಪೋಷಕರು ಮುಂದಾಗುತ್ತಿದ್ದಾರೆ. ಅದೂ ಹಳ್ಳಿಗಳಲ್ಲೇ ಹೆಚ್ಚು ಬಾಲ್ಯ ವಿವಾಹದ ಸಿದ್ದತೆ ಮಾಡಿಕೊಳ್ಳಲಾಗ್ತಿದೆ ಎಂದು ವನಿತಾ ಸಹಾವಾಣಿಯಿಂದ ಆತಂಕದ ಮಾಹಿತಿ ಬೆಳಕಿಗೆ ಬಂದಿದೆ.

 

 

 

ಹೀಗೆ ತುಮಕೂರು, ಚನ್ನಪಟ್ಟಣ, ಹಾಸನ, ಬೆಂಗಳೂರು  ಗ್ರಾಮಾಂತರ, ಮಂಡ್ಯ ಮುಂತಾದ ಜಿಲ್ಲೆಗಳಲ್ಲಿ ಬಾಲ್ಯ ವಿವಾಹಕ್ಕೆ ಸಿದ್ದತೆಗಳನ್ನು ನಡೆಸಿಕೊಳ್ಳಲಾಗ್ತಿದೆ. ಆಯಾ ಜಿಲ್ಲೆಗಳಲ್ಲಿರುವ ಕೆಲ ಹಳ್ಳಿಗಳಲ್ಲಿ ಅಪ್ತಾಪ್ತ ಹೆಣ್ಣು ಮಕ್ಕಳಿಗೆ ಮದುವೆ ಮಾಡಲು ಪೋಷಕರು ಮುಂದಾಗ್ತಿದ್ದಾರೆ ಎನ್ನಲಾಗಿದೆ. ಸಂಬಂಧಿಕರಿಂದಲೇ ವನಿತಾ ಸಹಾಯವಾಣಿಗೆ ಬಾಲ್ಯ ವಿವಾಹ ಬಗ್ಗೆ ಮಾಹಿತಿ ಸಿಕ್ಕಿದ್ದು, ಕಳೆದ ಎರಡು ತಿಂಗಳಲ್ಲೇ 17 ಬಾಲ್ಯ ವಿವಾಹ ತಡೆದ ತಡೆಯಲಾಗಿದೆ. ರಾತ್ರೋ ರಾತ್ರಿ ಕದ್ದು ಮುಚ್ಚಿ ಮದುವೆ ಮಾಡುತ್ತಿರುವ ಸ್ಥಳಗಳಿಗೆ ಪೊಲೀಸರು ದಿಢೀರ್ ಭೇಟಿ ನೀಡಿ ಮದುವೆ ನಿಲ್ಲಿಸ್ತಿದ್ದಾರೆ. ಆಯಾ ಸ್ಥಳೀಯ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಿ ವನಿತಾ ಸಹಾಯವಾಣಿಯವರು ಮದುವೆ ನಿಲ್ಲಿಸಿದ್ದಾರೆ. ಪೋಷಕರ ಒತ್ತಾಯದ ಮೇರೆಗೆ ಅಪ್ರಾಪ್ತ ಹೆಣ್ಣುಮಕ್ಕಳು ಮದುವೆಗೆ  ಒಪ್ಪಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

 

Also Read  ಬೆಳ್ತಂಗಡಿ: ಸರಕಾರಿ ಬಸ್ಸುಗಳ ಕೊರತೆ ನೀಗಿಸಲು ಸಂಚಾರಿ ನಿಯಂತ್ರಕರಿಗೆ (TC) ಸಿಎಫ್ಐ ವತಿಯಿಂದ ಮನವಿ

 

error: Content is protected !!
Scroll to Top